Tuesday, 20th February 2018
×
Home About Us Advertise With s Contact Us

ನಕಲು ಮಾಡಲು ಪೋಷಕರೇ ನೀಡುತ್ತಾರೆ ಸಾಥ್ !

ಹಜಿಪುರ: ಉತ್ತಮವಾಗಿ ಓದಿಸಿ ಒಳ್ಳೆಯ ಅಂಕಗಳನ್ನು ಪಡೆಯುವಂತೆ ಪ್ರೋತ್ಸಾಹಿಸಬೇಕಾದ ಪೋಷಕರೇ ಮಕ್ಕಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಸಾಥ್ ನೀಡಿದರೆ ಆ ಮಕ್ಕಳ ಭವಿಷ್ಯ ಏನಾಗಬಹುದು?

Copy

ಬಿಹಾರದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದ್ದು, ಇಲ್ಲಿ ಕಷ್ಟಪಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಿಂತ ನಕಲು ಮಾಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ.

ಆಘಾತಕಾರಿ ವಿಷಯವೆಂದರೆ ಸ್ವತಃ ಮಕ್ಕಳ ಪೋಷಕರೇ ಶಾಲಾ ಕಟ್ಟಡದ ಕೌಂಪೌಂಡ್ ಹಾರಿ ಬಂದು ಕಿಟಕಿಯ ಮೂಲಕ ತಮ್ಮ ಮಕ್ಕಳಿಗೆ ಉತ್ತರ ಹೇಳಿಕೊಡುತ್ತಿದ್ದಾರೆ.ಚೀಟಿ ನೀಡುತ್ತಿದ್ದಾರೆ. ಶಾಲೆಯ ಸುತ್ತಮುತ್ತ ಪ್ರವೇಶಕ್ಕೆ ನಿಷೇಧ ಹೇರಿದ್ದರು ಪೊಲೀಸರಿಗೆಯೇ ಲಂಚಕೊಟ್ಟು ಕೆಲ ಪೋಷಕರು, ವಿದ್ಯಾರ್ಥಿಗಳ ಸ್ನೇಹಿತರು  ಶಾಲೆಯೊಳಗೆ ಬರುತ್ತಿದ್ದಾರೆ ಎನ್ನಲಾಗಿದೆ. ಇನ್ನು ಶಾಲೆಯ ಮುಖಂಡರುಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.

ನಾವಿಗಾಗಲೇ 500 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ನಕಲು ಮಾತ್ರ ಅವ್ಯಾಹತವಾಗಿ ನಡೆಯುತ್ತಿದೆ.

ಒಟ್ಟಿನಲ್ಲಿ ಕೈ ಕಾಲುಗಳಲ್ಲಿ ಬರೆದುಕೊಂಡು ಬಂದು, ಬಟ್ಟೆಯೊಳಗೆ ಚೀಟಿ ಇಟ್ಟುಕೊಂಡು ನಕಲು ಮಾಡುವುದರಿಂದ ಹಿಡಿದು ಪೋಷಕರೇ ನೇರ ಶಾಲೆಯೊಳಗೆ ಬಂದು ಉತ್ತರ ಹೇಳುವ ಮಟ್ಟದವರೆಗೆ ತಲುಪಿದೆ ನಮ್ಮ ಶಿಕ್ಷಣ ವ್ಯವಸ್ಥೆ. ಆದರೆ ಸರ್ಕಾರ ಮಾತ್ರ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top