ನವದೆಹಲಿ: ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತದ ಅತ್ಯುನ್ನತ ರ್ಯಾಂಕ್ನ ಅಧಿಕಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹಾಲೆ ಬುಧವಾರ ಭಾರತಕ್ಕೆ ಆಗಮಿಸಿದ್ದು, ಭಾರತದ ವಿವಿಧ ಅಧಿಕಾರಿಗಳು, ಎನ್ಜಿಓ ನಾಯಕರನ್ನು ಭೇಟಿಯಾಗಲಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ‘ಯುಎಸ್-ಭಾರತದ ನಡುವಣ ಸಂಬಂಧ ಮುಂಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಗೊಳ್ಳಲಿದೆ, ಸಮಾನ ಹಿತಾಸಕ್ತಿಗಳು ನಮ್ಮನ್ನು ಒಂದುಗೂಡಿಸಲಿದೆ’ ಎಂದರು.
‘ನಾವು ವಿಶ್ವದ ಅತೀದೊಡ್ಡ ಮತ್ತು ಅತೀ ಹಿರಿಯ ಪ್ರಜಾಪ್ರಭುತ್ವವಾಗಿದ್ದೇವೆ, ವಿವಿಧ ವಿಧದ ಅವಕಾಶಗಳನ್ನು ಪರಸ್ಪರ ಎದುರು ನೋಡುತ್ತಿದ್ದೇವೆ. ಭಯೋತ್ಪಾದನೆ ನಮ್ಮ ಪ್ರಮುಖ ಸವಾಲಾಗಿದೆ, ಮಿಲಿಟರಿ ಆಯಾಮದಲ್ಲಿ ನಾವು ಬಲಿಷ್ಠ ರೀತಿಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ’ ಎಂದರು.
ನಿಕ್ಕಿ ಹಾಲೆ ಅವರು ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.