ನವದೆಹಲಿ: ಉಗ್ರ ಸಂಘಟನೆ ಸಿಮಿಯ ಬಗ್ಗೆ ಅಪ್ಡೇಟ್ಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ರಾಜ್ಯಗಳಿಂದ ವರದಿಗಳು ಬಂದ ಬಳಿಕ ಸಿಮಿ ಮೇಲಿನ ನಿಷೇಧವನ್ನು ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ದೇಶ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಮೇಲೆ ವಿಧಿಸಿರುವ ನಿಷೇಧ 2019ರ ಜನವರಿ 31ಕ್ಕೆ ಅಂತ್ಯವಾಗಲಿದೆ. ಒಂದು ವೇಳೆ ಈ ಸಂಘಟನೆ ತನ್ನ ಕಾನೂನು ಬಾಹಿರ ಕಾರ್ಯವನ್ನು ಮುಂದುವರೆಸುತ್ತಲೇ ಇದೆ ಎಂದಾದರೆ ಕೇಂದ್ರ ಅದರ ಮೇಲಿನ ನಿಷೇಧವನ್ನು ನವೀಕರಿಸಲಿದೆ.
ಹೀಗಾಗಿ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದು, ಸಿಮಿ ಸಂಘಟನೆಯ ಅಪ್ಡೇಟ್ಗಳನ್ನು ನೀಡುವಂತೆ ತಿಳಿಸಿದೆ. ರಾಜ್ಯಗಳು ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.