ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಲೀಟರ್ಗೆ ಪ್ರಸ್ತುತ 8-12 ಪೈಸೆ ರೇಂಜ್ನಲ್ಲಿ ಕಡಿತಗೊಂಡಿದೆ. ಸತತ 8ನೇ ದಿನವೂ ದರದಲ್ಲಿ ಕಡಿತಗೊಂಡಿರುವುದು ಗ್ರಾಹಕರಲ್ಲಿ ತುಸು ನಿರಾಳತೆಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ.
ಪೆಟ್ರೋಲ್, ಡೀಸೆಲ್ ದರಗಳನ್ನು ಕಚ್ಛಾ ತೈಲ ದರ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದಲ್ಲಿ ಪ್ರತಿನಿತ್ಯ ಪರಿಷ್ಕರಣೆಗೊಳಿಸಲಾಗುತ್ತದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ರೂ.71, ಮುಂಬಯಿಯಲ್ಲಿ ರೂ.70 ಇದೆ.
ಸತತವಾಗಿ 16 ದಿನಗಳ ಕಾಲ ಪೆಟ್ರೋಲ್, ಡೀಸೆಲ್ಗಳ ದರ ಏರಿಕೆಗೊಂಡು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಕಳೆದ 8 ದಿನಗಳಿಂದ ಬೆಲೆಯಲ್ಲಿ ತುಸು ಕಡಿಮೆಯಾಗುತ್ತಿರುವುದು ಆತಂಕವನ್ನು ದೂರ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.