ಪನಾಮ: ಭಯೋತ್ಪಾದನೆಯ ವಿರುದ್ಧ ಜಂಟಿ ಸಮರ ನಡೆಸಲು ಭಾರತ ಮತ್ತು ಪನಾಮ ಪರಸ್ಪರ ಸಮ್ಮತಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪನಾಮ ಅಧ್ಯಕ್ಷ ಜಾನ್ ಕಾರ್ಲೊಸ್ ವರೇಲಾ ನಡುವೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಬಿದ್ದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ(ಪೂರ್ವ) ಪ್ರೀತಿ ಸರನ್ ಅವರು, ಭಯೋತ್ಪಾದನಾ ಸಮಸ್ಯೆ ನಿವಾರಣೆಗೆ, ಮಾತುಕತೆಗೆ ಪರಸ್ಪರ ಸಹಕಾರ, ಗುಪ್ತಚರ ಮಾಹಿತಿ ಪರಸ್ಪರ ಹಂಚಿಕೆ. ಮಾನವ ಕಳ್ಳ ಸಾಗಣೆ ವಿಷಯಗಳು, ಅಪರಾಧ ವಿಷಯಗಳ ಬಗ್ಗೆ ಪರಸ್ಪರ ಕಾನೂನು ಸಲಹೆ ಒಪ್ಪಂದ ಮುಂತಾದ ವಿಷಯಗಳ ಬಗ್ಗೆ ಭಾರತ ಮತ್ತು ಪನಾಮದ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದಿದ್ದಾರೆ.
ಭಾರತ ಪನಾಮಗೆ ಬಯೋ ಟೆಕ್ನಾಲಜಿಗಾಗಿ 10 ಮಿಲಿಯನ್ ಡಾಲರ್ ಮತ್ತು ಇನ್ನೋವೇಶನ್ ಸೆಕ್ಟರ್ಗೆ 15 ಮಿಲಿಯನ್ ಡಾಲರ್ ಅನುದಾನ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.