ರಾಂಪುರ: ಅಲಿಘಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಇರುವ ಪಾಕಿಸ್ಥಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾನ ಭಾವಚಿತ್ರವನ್ನು ನಾಶ ಮಾಡುವವರಿಗೆ ರೂ.೧ಲಕ್ಷ ಬಹುಮಾನ ನೀಡುವುದಾಗಿ ಆಲ್ ಇಂಡಿಯಾ ಮುಸ್ಲಿಂ ಮಹಾಸಂಘ ಘೋಷಿಸಿದೆ.
ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ಅಲಿಗಢ ವಿಶ್ವವಿದ್ಯಾಲಯದಲ್ಲಿ ಇರುವ ಬಗ್ಗೆ ಭಾರೀ ವಿವಾದಗಳು ಸೃಷ್ಟಿಯಾಗಿದೆ. ಕೆಲವರು ಫೋಟೋವನ್ನು ಅಲ್ಲಿಂದ ತೆಗೆದು ಹಾಕಬೇಕು ಎಂದರೆ, ಕೆಲವರು ಫೋಟೋದ ಪರ ವಾದ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮಹಾಸಂಘದ ಅಧ್ಯಕ್ಷ ಫರ್ಹಾತ್ ಅಲಿ ಖಾನ್, ಪಾಕಿಸ್ಥಾನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಲ್ಲ, ಅದೇ ರೀತಿ ಭಾರತದಲ್ಲೂ ಪಾಕಿಸ್ಥಾನಿ ಹೋರಾಟಗಾರರ ಭಾವಚಿತ್ರ ಹಾಕಬಾರದು ಎಂದಿದ್ದಾರೆ.
ಜಿನ್ನಾ ಮತ್ತು ಆತನಂತಹ ವ್ಯಕ್ತಿಗಳ ಫೋಟೋಗಳನ್ನು ಧ್ವಂಸ ಮಾಡಿ ಎಂದು ನಾನು ಮನವಿ ಮಾಡುತ್ತೇನೆ. ಅಂತಹವರಿಗೆ 1ಲಕ್ಷ ಬಹುಮಾನವನ್ನೂ ನೀಡುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.