ನವದೆಹಲಿ: ಮಕ್ಕಳ ಮೇಲೆ ವಿಪರೀತ ಒತ್ತಡ ಹಾಕುವುದನ್ನು ತಗ್ಗಿಸುವ ಸಲುವಾಗಿ ಎರಡನೇಯ ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್ಗಳನ್ನು ಕೊಡಬಾರದು ಎಂದು ಎನ್ಸಿಇಆರ್ಟಿ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ಗಂಟೆ ಮಾತ್ರ ಹೋಂ ವರ್ಕ್ ಕೊಡಬೇಕು, 6, 7, 8ನೇ ತರಗತಿ ಮಕ್ಕಳಿಗೆ ದಿನಕ್ಕೆ ಒಂದು ಗಂಟೆ ಮತ್ತು 8-12ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಗಂಟೆ ಹೋಂವರ್ಕ್ ಕೊಡಬೇಕು ಎಂದು ಅದು ಸೂಚಿಸಿದೆ.
1 ಮತ್ತು 2ನೇ ತರಗತಿ ಮಕ್ಕಳಿಗೆ ಕೇವಲ ಭಾಷೆ ಮತ್ತು ಗಣಿತದ ಎರಡು ಪುಸ್ತಕಗಳನ್ನು ಮಾತ್ರ ಕಲಿಸಬೇಕು, 3-5ನೇ ತರಗತಿ ಮಕ್ಕಳಿಗೆ ಪರಿಸರ ವಿಜ್ಞಾನ, ಭಾಷೆ, ಗಣಿತ ಮಾತ್ರ ಕಲಿಸಬೇಕು ಎಂದು ಸೂಚಿಸಿದೆ. ಜ್ಞಾಪಕ ಶಕ್ತಿ ವೃದ್ಧಿಗೆ ಸಾಮಾನ್ಯ ಜ್ಞಾನದ ಒಂದು ವಿಷಯವನ್ನು ಬೋಧಿಸಬಹುದು ಎಂದಿದೆ.
ಮಕ್ಕಳ ಮೇಲೆ ಮಾನಸಿಕ ಒತ್ತಡ ಬೀಳುವುದನ್ನು ತಡೆಯಲು ಎನ್ಸಿಇಆರ್ಟಿ ಈ ನಿರ್ಧಾರ ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.