ನವದೆಹಲಿ: ದೇಶದ ಮಹಿಳೆಯರು ಎಲ್ಲಾ ವಲಯದಲ್ಲೂ ತಮ್ಮ ಶಕ್ತಿಯ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಕೋಲ್ಕತ್ತಾದ ತಾನ್ಯ ಸನ್ಯಾಲ್ ಅವರು ಫೈಯರ್ ಫೈಟರ್ಸ್ಗೆ ಸೇರ್ಪಡೆಗೊಂಡ ದೇಶದ ಮೊದಲ ಮಹಿಳೆಯೆಂಬ ಇತಿಹಾಸ ಸೃಷ್ಟಿಸಿದ್ದಾರೆ.
ಇದೇ ಮೊದಲ ಬಾರಿಗೆ ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಹಿಳಾ ಫೈಯರ್ಫೈಟರ್ನ್ನು ನೇಮಕಗೊಳಿಸಿದ್ದು, ತಾನ್ಯ ಅವರು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿ ಇನ್ನು ಒಂದು ತಿಂಗಳೊಳಗೆ ಈ ಕಾರ್ಯಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ವಿಮಾನಗಳ ಹಾರಾಟ ಮತ್ತು ನಿಲುಗಡೆಯ ವೇಳೆ ಫೈಯರ್ ಪ್ರೊಟೆಕ್ಷನ್ ಸರ್ವಿಸ್ ಅತ್ಯಗತ್ಯವಾಗಿದ್ದು. ಪ್ರಸ್ತುತ ಅಥಾರಿಟಿಯಲ್ಲಿ 3,310 ಫೈಯರ್ಫೈಟರ್ಗಳಿದ್ದಾರೆ. ಎಲ್ಲರೂ ಪುರುಷರು. ಸಿಬ್ಬಂದಿಗಳ ಕೊರತೆ ಇರುವ ಹಿನ್ನಲೆಯಲ್ಲಿ ಈಗ ಮಹಿಳಾ ಸಿಬ್ಬಂದಿಯನ್ನೂ ನೇಮಕ ಮಾಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.