ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಳುಗಳು ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ಶನಿವಾರ ಭಾರತದ ಖ್ಯಾತ ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್, ಬಾಕ್ಸರ್ ಗೌರವ್ ಸೋಲಂಕಿ ಮತ್ತು ಶೂಟರ್ ಸಂಜೀವ್ ರಜಪೂತ್ ಬಂಗಾರ ಗೆದ್ದು ಸಾಧನೆ ಮಾಡಿದ್ದಾರೆ.
ಮಹಿಳೆಯರ 45-44 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಮೇರಿಕೋಮ್ ಬಂಗಾರ ಜಯಿಸಿದರೆ, ಪುರುಷರ 52 ಕೆಜಿ ವಿಭಾಗದಲ್ಲಿ ಗೌರವ್ ಸೋಲಂಕಿ ಬಂಗಾರ ಗೆದ್ದಿದ್ದಾರೆ. ಪುರುಷರ 50ಮೀ ರೈಫಲ್ ವಿಭಾಗದಲ್ಲಿ ಸಂಜೀವ್ ರಜಪೂತ್ ಬಂಗಾರ ಜಯಿಸಿದ್ದಾರೆ.
ಪ್ರಸ್ತುತ ಭಾರತ ಒಟ್ಟು 47 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 20 ಬಂಗಾರ, ಬೆಳ್ಳಿ 13, ಕಂಚು 14 ಆಗಿದೆ.