ನವದೆಹಲಿ: ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಓಲಿಯವರು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಕಾಲ ಅವರು ಭಾರತ ಪ್ರವಾಸ ಹಮ್ಮಿಕೊಂಡಿದ್ದಾರೆ. ಪ್ರಧಾನಿಯಾದ ಬಳಿಕದ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ.
ದೆಹಲಿಗೆ ಆಗಮಿಸಿದ ಅವರನ್ನು ಗೃಹಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಎಸ್ಪಿ ಶುಕ್ಲಾ ಬರಮಾಡಿಕೊಂಡರು.
ಸಪತ್ನಿಕರಾಗಿ ಆಗಮಿಸಿದ ಓಲಿಯವರಿಗೆ ಅವರ ಸಂಪುಟ ಸಚಿವರು, ಸಂಸದರು, ಕಾರ್ಯದರ್ಶಿಗಳು, ಉನ್ನತ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಭಾರತದ ನಾಯಕರೊಂದಿಗೆ ಉನ್ನತ ಮಟ್ಟದ ಸಭೆಯನ್ನು ಅವರು ನಡೆಸಲಿದ್ದಾರೆ.
ಉತ್ತರಾಖಂಡದ ಪಟ್ನಾಗರ್ಗೆ ತೆರಳಿ ಅವರು ಗೋವಿಂದ್ ವಲ್ಲಭಾ ಪಂಥ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.