ನವದೆಹಲಿ: ಪ್ರತಿವರ್ಷ ಎಪ್ರಿಲ್ 5ರಂದು ನ್ಯಾಷನಲ್ ಮ್ಯಾರಿಟೈಮ್ ಡೇಯನ್ನು ಆಚರಿಸಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುತ್ತಿರುವ ತಟರಕ್ಷಕರನ್ನು, ನಾವಿಕರನ್ನು, ಸಮುದ್ರ ಕಣ್ಗಾವಲುಗಾರರನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತಿದೆ.
ಸಮುದ್ರ ಮಾರ್ಗಗಳನ್ನು ಬ್ರಿಟಿಷರೇ ನಿಯಂತ್ರಿಸುತ್ತಿದ್ದ ಕಾಲದಲ್ಲಿ, 1919ರ ಎ.5ರಂದು ಎಸ್ಎಸ್ ಲಾಯಲ್ಟಿ ಹಡಗು ಯುಕೆಯನ್ನು ತಲುಪಿತ್ತು. ಇದು ಭಾರತದ ಶಿಪ್ಪಿಂಗ್ ಇತಿಹಾಸದಲ್ಲೇ ಅತ್ಯಂತ ಮಹತ್ವದ ದಿನ.
ಈ ವರ್ಷ 55ನೇ ನ್ಯಾಷನಲ್ ಮಾರಿಟೈಮ್ ಡೇಯನ್ನು ಆಚರಿಸಲಾಗುತ್ತಿದ್ದು, ಇಂಡಿಯನ್ ಶಿಪ್ಪಿಂಗ್-ಆನ್ ಓಶಿಯನ್ ಆಫ್ ಅಪಾರ್ಚುನಿಟಿ ಥೀಮ್ನೊಂದಿಗೆ ಇದನ್ನು ಆಚರಿಸಲಾಗುತ್ತಿದೆ. ಮುಂಬಯಿಯಲ್ಲಿ ಈ ಪ್ರಯುಕ್ತ ಇಂದು ಕಾರ್ಯಕ್ರಮ ಜರುಗಲಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಶುಭಕೋರಿದ್ದು, ಶ್ರೀಮಂತ ಇತಿಹಾಸವುಳ್ಳ ಭಾರತದ ಮ್ಯಾರಿಟೈಮ್ ಸೆಕ್ಟರ್ ದೇಶವನ್ನು ಪರಿವರ್ತನೆಗೊಳಿಸುವ ಸಂಭಾವ್ಯತೆಯನ್ನು ಹೊಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.