News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ರೈಲ್ವೆಯ ಖಾಸಗಿ ಯೋಜನೆಗೆ ಆಸಕ್ತಿ ತೋರಿಸುತ್ತಿವೆ ಜಾಗತಿಕ ಸಂಸ್ಥೆಗಳು

ನವದೆಹಲಿ: ಖಾಸಗಿ ಕಂಪೆನಿಗಳಿಗೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಆಲ್ಸ್ಟೋಮ್ ಟ್ರಾನ್ಸ್‌ಪೋರ್ಟ್, ಬೊಂಬಾರ್ಡಿಯರ್, ಸೀಮೆನ್ಸ್ ಎಜಿ, ಟಾಲ್ಗೊ ಮತ್ತು ಮ್ಯಾಕ್ವಾರಿ ಸೇರಿದಂತೆ 24ಕ್ಕೂ ಹೆಚ್ಚು ಸಂಸ್ಥೆಗಳು  ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ವರದಿಗಳು ಹೇಳಿವೆ....

Read More

ಅನೇಕರು ನನ್ನ ಧರ್ಮ ಬದಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ, ನಾನೊಬ್ಬ ಹೆಮ್ಮೆಯ ಹಿಂದೂ : ದನೀಶ್ ಕನೇರಿಯಾ

ಇಸ್ಲಾಮಾಬಾದ್: ಹಿಂದೂ ಎಂಬ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿರುವ ದನೀಶ್ ಕನೇರಿಯಾ ಅವರು, ಹಲವು ವರ್ಷಗಳಿಂದ ಸಾಕಷ್ಟು ಜನರು ನನ್ನ ಧರ್ಮವನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಆದರೆ ವಿಫಲರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟ್ವಿಟರ್ ಬಳಕೆದಾರನೋರ್ವ ಅವರ ಬಳಿ ನಿಮ್ಮ...

Read More

ತನ್ನ ಫೈಟರ್ ಸ್ಕ್ರಾಡನ್ ಬಲವನ್ನು ಶೇ. 20 ರಷ್ಟು ಹೆಚ್ಚಳಗೊಳಿಸುತ್ತಿದೆ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆ ತನ್ನ ಫೈಟರ್ ಸ್ಕ್ವಾಡ್ರನ್ ಬಲವನ್ನು ಹೆಚ್ಚಿಸಲು 36 ಫ್ರೆಂಚ್ ರಫೆಲ್ ಜೆಟ್‌ಗಳನ್ನು ಮತ್ತು ದೇಶೀಯ ತೇಜಸ್ ಲೈಟ್ ಕಂಬಾತ್ ಏರ್‌ಕ್ರಾಫ್ಟ್ (ಎಲ್‌ಸಿಎ) ಅನ್ನು ಸೇರ್ಪಡೆಗೊಳಿಸುತ್ತಿದೆ. ಇನ್ನೊಂದೆಡೆ, ವಾಯುಸೇನಾ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರ...

Read More

ಐಬಿಎಂನ ಸಿಇಓ ಆಗಲಿದ್ದಾರೆ ಭಾರತೀಯ ಮೂಲದ ಅರವಿಂದ್ ಕೃಷ್ಣ

ನವದೆಹಲಿ :  ಅಮೆರಿಕದ ಐಟಿ ದೈತ್ಯ ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ (ಐಬಿಎಂ)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಅರವಿಂದ್ ಕೃಷ್ಣ ಅವರು ನೇಮಕಗೊಂಡಿದ್ದಾರೆ. ವರ್ಜೀನಿಯಾ ರೊಮೆಟ್ಟಿಯ ಅವರ ಉತ್ತರಾಧಿಕಾರಿಯಾಗಿ ಇವರ ನೇಮಕವಾಗಿದೆ. ಈ ವರ್ಷದ ಕೊನೆಯಲ್ಲಿ ವರ್ಜೀನಿಯಾ ರೊಮೆಟ್ಟಿಯ ಅವರು...

Read More

ಅಧಿವೇಶನದಲ್ಲಿ ಆರ್ಥಿಕತೆ, ಜನ ಸಬಲೀಕರಣದ ಚರ್ಚೆ ನಡೆಯುವ ಭರವಸೆ ಇದೆ : ಮೋದಿ

ನವದೆಹಲಿ: ಇಂದು ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕತೆ ಮತ್ತು ಜನರ ಸಬಲೀಕರಣದ ಬಗ್ಗೆ ವಿವರವಾದ ಚರ್ಚೆ ನಡೆಯುವ ಬಗ್ಗೆ ನನಗೆ ಭರವಸೆ ಇದೆ ಎಂದು ಹೇಳಿದ್ದಾರೆ. “ನಾನು ಉಭಯ ಸದನಗಳಲ್ಲಿ ಆರ್ಥಿಕತೆಯ ಬಗ್ಗೆ ವ್ಯಾಪಕವಾದ,...

Read More

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ 3 ಉಗ್ರರನ್ನು ಹತ್ಯೆ ಮಾಡಿದ ಯೋಧರು

ಜಮ್ಮು: ಜಮ್ಮು ಬಳಿ ಶುಕ್ರವಾರ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒರ್ವ ಪೊಲೀಸ್ ಗಾಯಗೊಂಡಿದ್ದಾರೆ. ಮುಂಜಾನೆ 5.45 ರ ಸುಮಾರಿಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ನಾಗ್ರೋಟಾ ಟೋಲ್ ಪೋಸ್ಟ್ ಬಳಿ ವಾಹನ ತಪಾಸಣೆ...

Read More

ಬೋಡೋ ಶಾಂತಿ ಒಪ್ಪಂದದ ಬಳಿಕ ಶಸ್ತ್ರತ್ಯಾಗ ಮಾಡಿದ 1,615 ಉಗ್ರರು

ನವದೆಹಲಿ: ಬೋಡೋ ಶಾಂತಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ ನಂತರ, ಗುವಾಹಟಿಯಲ್ಲಿ ಇಂದು ನಡೆದ ಶರಣಾಗತಿ ಸಮಾರಂಭದಲ್ಲಿ ಒಟ್ಟು 1,615 ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್ (ಎನ್‌ಡಿಎಫ್‌ಬಿ) ಸದಸ್ಯರು ಗುರುವಾರ ಶಸ್ತ್ರ ತ್ಯಾಗ ಮಾಡಿದ್ದಾರೆ. ಎನ್‌ಡಿಎಫ್‌ಬಿ (ಎನ್‌ಡಿಎಫ್‌ಬಿ) ಗುವಾಹಟಿಯ ಗುವಾಹಟಿ...

Read More

ಭಾರತವನ್ನು ಇಸ್ಲಾಂ ರಾಷ್ಟ್ರವಾಗಿಸುವುದು ಶರ್ಜೀಲ್ ಇಮಾಮ್ ಗುರಿ : ದೆಹಲಿ ಪೊಲೀಸ್

ನವದೆಹಲಿ: ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಬಂಧಿತನಾಗಿರುವ ಜೆಎನ್­ಯು ವಿದ್ಯಾರ್ಥಿ ಮುಸ್ಲಿಂ ಮೂಲಭೂತವಾದಿಯಾಗಿ ಪರಿವರ್ತನೆಗೊಂಡಿರುವ ವ್ಯಕ್ತಿಯಾಗಿದ್ದಾನೆ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸಲು ಆತ ಬಯಸುತ್ತಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋ ಸತ್ಯವಾದದು ಎಂಬುದನ್ನು...

Read More

ಕರ್ನಾಟಕದಲ್ಲಿ ಶ್ರೇಣಿ 2, ಶ್ರೇಣಿ 3 ನಗರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನ : ಪ್ರಲ್ಹಾದ್ ಜೋಶಿ

ಬೆಂಗಳೂರು: ಕರ್ನಾಟಕದಲ್ಲಿ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ ರೋಡ್ ಶೋ’ದಲ್ಲಿ ಮಾತನಾಡಿದ ಅವರು, ರಾಜ್ಯದ ಶ್ರೇಣಿ -2 ಮತ್ತು...

Read More

ಕರೋನವೈರಸ್ : ಭಾರತದಲ್ಲಿ ದುಪ್ಪಟ್ಟುಗೊಂಡ N95 ಮಾಸ್ಕ್­ ತಯಾರಿಕೆ

ಚೆನ್ನೈ: ಚೀನಾದಲ್ಲಿ ಕೊರೊನವೈರಸ್ ಹಾವಳಿ ತೀರಾ ಭಯಾನಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಎನ್ 95 ಮಾಸ್ಕ್­ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯಿಂದಾಗಿ ಇದರ ದರದಲ್ಲೂ ಶೇ.50ರಷ್ಟು ಏರಿಕೆಯಾಗಿದೆ. ಭಾರತೀಯ ತಯಾರಕರು ಮತ್ತು ಡೀಲರ್­ಗಳಿಗೆ ಹೆಚ್ಚಿನ ಆದಾಯವೂ ಬರುತ್ತಿದೆ. N95 ಮುಖವಾಡಗಳು ಮೂಗು ಮತ್ತು...

Read More

Recent News

Back To Top