News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಿಮೋಟ್‌ ವೋಟಿಂಗ್‌ ಕುರಿತ ಚರ್ಚೆಗೆ ಸರ್ವಪಕ್ಷ ಸಭೆ ಕರೆದ ಚುನಾವಣಾ ಆಯೋಗ

ನವದೆಹಲಿ: ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಸರ್ವಪಕ್ಷ ಸಭೆಯನ್ನು ಕರೆಯುತ್ತಿದೆ.

ರಿಮೋಟ್ ವೋಟಿಂಗ್ ಮೆಷಿನ್ ಕುರಿತು ಚರ್ಚಿಸಲು ಆಯೋಗವು ಇಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ರಿಮೋಟ್ ವೋಟಿಂಗ್ ಮೆಷಿನ್ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಅಲ್ಲದೇ ರಿಮೋಟ್‌ ವೋಟಿಂಗ್‌ ಮೆಷಿನ್ ಪ್ರದರ್ಶನ ನಡೆಯಲಿದೆ. ಹೀಗಾಗಿ ಸಭೆಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು, ನಾಯಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ.

ಪ್ರಸ್ತುತ ಬಳಕೆಯಲ್ಲಿರುವ ಇವಿಎಂಗಳ ಎಲ್ಲಾ ಭದ್ರತಾ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬಹು-ವಿಭಾಗದ ವಿದ್ಯುನ್ಮಾನ ಮತಯಂತ್ರವನ್ನು ಬಳಸಿಕೊಂಡು ದೇಶೀಯ ವಲಸಿಗರಿಗೆ ‘ರಿಮೋಟ್ ವೋಟಿಂಗ್’ ಅನ್ನು ಪರಿಚಯಿಸಲು ಚುನಾವಣಾ ಸಂಸ್ಥೆ ಪ್ರಸ್ತಾಪಿಸಿದೆ.

EVM ನ ಈ ಮಾರ್ಪಡಿಸಿದ ರೂಪವು ದೂರದ ಮತಗಟ್ಟೆಯಿಂದ 72 ಬಹು ಕ್ಷೇತ್ರಗಳನ್ನು ನಿರ್ವಹಿಸಬಲ್ಲದು. ಅಂದರೆ ಒಂದು ಮೆಷಿನ್‌ ಮೂಲಕ 72 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಆಯಾ ಕ್ಷೇತ್ರದ ಮತದಾರರು ಮತ ಚಲಾಯಿಸಬಹುದು. ಇದರಿಂದ ಮತದಾನಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ಅಗತ್ಯ ಬೀಳುವುದಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top