News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿ.24 ರಿಂದ ಜ.3 ರ ನಡುವೆ ದೇಶದಲ್ಲಿ ಕೋವಿಡ್‌-19ನ 11 ರೂಪಾಂತರ ಪತ್ತೆ

ನವದೆಹಲಿ:  ಡಿಸೆಂಬರ್ 24 ರಿಂದ ಜನವರಿ 3 ರ ನಡುವೆ ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಿದಾ ಕೋವಿಡ್-19 ನ ‌11 ರೂಪಾಂತರಗಳು ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

11 ಓಮಿಕ್ರಾನ್ ಉಪ-ವೇರಿಯಂಟ್‌ಗಳು ಅಂತರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆಯ ಸಮಯದಲ್ಲಿ ಕಂಡುಬಂದಿವೆ ಮತ್ತು ಈ ಎಲ್ಲಾ ರೂಪಾಂತರಗಳು ದೇಶದಲ್ಲಿ ಪ್ರಸ್ತುತವಿರುವವು ಎಂದು ಮೊದಲೇ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂತರಾಷ್ಟ್ರೀಯ ಪ್ರಯಾಣಿಕರ ಒಟ್ಟು 19,227 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 124 ಪಾಸಿಟಿವ್ ಎಂದು ಕಂಡುಬಂದಿದೆ ಮತ್ತು ಅವರನ್ನು ಪ್ರತ್ಯೇಕಿಸಲಾಗಿದೆ. 124 ಪಾಸಿಟಿವ್ ಮಾದರಿಗಳಲ್ಲಿ, 40 ರ ಜಿನೋಮ್ ಅನುಕ್ರಮ ಫಲಿತಾಂಶಗಳನ್ನು ಸ್ವೀಕರಿಸಲಾಗಿದೆ, ಇದರಲ್ಲಿ XBB.1 ಸೇರಿದಂತೆ XBB ಗರಿಷ್ಠ 14 ಮಾದರಿಗಳಲ್ಲಿ ಕಂಡುಬಂದಿದೆ. ಅಧಿಕೃತ ಮೂಲಗಳ ಪ್ರಕಾರ ಒಂದು ಮಾದರಿಯಲ್ಲಿ BF 7.4.1 ಕಂಡುಬಂದಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶ 188 ಹೊಸ ಪ್ರಕರಣಗಳಿಗೆ ಸಾಕ್ಷಿಯಾಗಿರುವುದರಿಂದ ಭಾರತ ಗುರುವಾರ ಕೋವಿಡ್ ಸೋಂಕುಗಳಲ್ಲಿ ಸ್ವಲ್ಪ ಹೆಚ್ಚಳವನ್ನು ಕಂಡಿದೆ. ದೇಶದಲ್ಲಿ ಬುಧವಾರ 175 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದ ಸಕ್ರಿಯ ಪ್ರಕರಣ ಪ್ರಸ್ತುತ 2,554 ರಷ್ಟಿದೆ ಮತ್ತು ಸಕ್ರಿಯ ಪ್ರಕರಣದ ದರವು ಶೇಕಡಾ 0.01 ರಷ್ಟಿದೆ. ಈ ನಡುವೆ, ಕಳೆದ 24 ಗಂಟೆಗಳಲ್ಲಿ 201 ಚೇತರಿಕೆ ಕಂಡಿದ್ದರಿಂದ ದೇಶದ ಚೇತರಿಕೆ ದರವು 98.8 ಪ್ರತಿಶತದಷ್ಟಿದೆ, ಇದು ಒಟ್ಟು ಚೇತರಿಕೆಯ ಪ್ರಮಾಣವನ್ನು 4,41,46,055 ಕ್ಕೆ ತೆಗೆದುಕೊಂಡು ಹೋಗಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,93,051 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ನಡೆಸಿದ ಕೋವಿಡ್ ಪರೀಕ್ಷೆಗಳ ಸಂಖ್ಯೆ 91.15 ಕೋಟಿಗೆ ಏರಿದೆ ಎಂದು ಅದು ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top