News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

“ಮೈ ಸಾರಿ ಮೈ ಪ್ರೈಡ್” ನೇಯ್ಗೆ ಆಧಾರಿತ ಕೈಮಗ್ಗ ಸೀರೆಗಳ ಉತ್ಸವಕ್ಕೆ ಚಾಲನೆ

ನವದೆಹಲಿ: ಭಾರತೀಯ ನೇಕಾರ ಸಮುದಾಯವನ್ನು ಬೆಂಬಲಿಸಲು ನೇಕಾರರಿಗೆ ಜಿಐ ಟ್ಯಾಗ್ ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಸೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ದೆಹಲಿಯಲ್ಲಿ “ಮೈ ಸಾರಿ ಮೈ ಪ್ರೈಡ್” ಎಂಬ ವಿಶೇಷವಾದ ನೇಯ್ಗೆ ಆಧಾರಿತ ಕೈಮಗ್ಗದ ಸೀರೆಗಳ ಉತ್ಸವವಾದ ‘VIRAASAT, Celebrating 75 handwoven saris of India’ ಉದ್ಘಾಟಿಸಿ ಮಾತನಾಡಿದರು.

“ದೇಶದ ನೇಕಾರರು ಮತ್ತು ಭಾರತದ ಸಂಪ್ರದಾಯಗಳನ್ನು ಪ್ರದರ್ಶಿಸುವ ಇಂತಹ ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸುವ ಮೂಲಕ ಜವಳಿ ಸಚಿವಾಲಯವು ವಿಶಿಷ್ಟ ಹೆಜ್ಜೆ ಇಟ್ಟಿದೆ. ಸಚಿವಾಲಯವು 75 ಕೈಯಿಂದ ನೇಯ್ದ ಸೀರೆಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದೆ” ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 5 ಎಫ್ ದೃಷ್ಟಿಕೋನವನ್ನು ಉಲ್ಲೇಖಿಸಿದ ಸೀತಾರಾಮನ್ – ಫಾರ್ಮ್‌, ಫೈಬರ್‌, ಫ್ಯಾಬ್ರಿಕ್‌ನಿಂದ  ಫ್ಯಾಷನ್‌ವರೆಗೆ ವಿದೇಶಿವರೆಗೆ ಈ ಪ್ರದರ್ಶನವನ್ನು ಆಯೋಜಿಸಿರುವ ಜವಳಿ ಸಚಿವಾಲಯದ ಉದ್ದೇಶ ಉತ್ತಮವಾಗಿದ್ದು, ನೇಕಾರರು ತಮ್ಮ ಕೆಲಸವನ್ನು ಪ್ರದರ್ಶಿಸಲು ಉತ್ತೇಜಿತರಾಗುತ್ತಿದ್ದಾರೆ ಎಂದಿದ್ದಾರೆ.

ಸ್ವಾತಂತ್ರ್ಯದ 75 ವರ್ಷಗಳ ಜೊತೆಗೆ, ಆಜಾದಿ ಕಾ ಅಮೃತ ಮಹೋತ್ಸವದಲ್ಲಿ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 75 ಕೈಮಗ್ಗ ನೇಕಾರರಿಂದ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉತ್ಸವವನ್ನು ಎರಡು ಹಂತಗಳಲ್ಲಿ ಡಿಸೆಂಬರ್ 16-30 2022 ಮತ್ತು ಜನವರಿ 3-17 2023 (11 AM to 8 PM) ವರೆಗೆ ಹ್ಯಾಂಡ್ಲೂಮ್ ಹಾತ್, ಜನಪಥ್, ನವದೆಹಲಿಯಲ್ಲಿ ಆಯೋಜಿಸಲಾಗಿದೆ. ಕೈಮಗ್ಗ ಕ್ಷೇತ್ರವು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ, ಜೊತೆಗೆ ಅನೇಕ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top