ನವದೆಹಲಿ: ನಿವೃತ್ತ ಸೈನಿಕರೊಬ್ಬರ 100 ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಭಾರತೀಯ ಸೇನೆ ಜನರ ಮನಸ್ಸು ಗೆದ್ದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಗಳನ್ನು ಪಡೆಯುತ್ತಿದೆ.
ಹವಾಲ್ದಾರ್ ಆಗಿ ನಿವೃತ್ತರಾದ ಕೆ.ಕೆ.ಗೋಪಾಲಕೃಷ್ಣನ್ ನಾಯರ್ ಅವರ 100ನೇ ಜನ್ಮದಿನವನ್ನು ನ.23ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಸೇನಾ ಸೇವಾದಳ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂಭ್ರಮವನ್ನು ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. “ಹವಿಲ್ದಾರ್ KK ಗೋಪಾಲಕೃಷ್ಣನ್ ನಾಯರ್ (ನಿವೃತ್ತ) 23 ನವೆಂಬರ್ 2022 ರಂದು 100 ವರ್ಷಗಳನ್ನು ಪೂರೈಸಿದರು. ಆರ್ಮಿ ಸರ್ವಿಸ್ ಕಾರ್ಪ್ಸ್ ಅವರ ಶತಮಾನೋತ್ಸವದ ಜನ್ಮದಿನದಂದು ಅವರನ್ನು ಗೌರವಿಸಿತು ಮತ್ತು ಡೈರೆಕ್ಟರ್ ಜನರಲ್ ಪರವಾಗಿ ಸ್ಮರಣಿಕೆಯನ್ನು ನೀಡಲಾಯಿತು” ಎಂದಿದೆ.
ಈ ಪೋಸ್ಟ್ಗೆ ಯೋಧನ ಮೊಮ್ಮಗ ಕೂಡ ಕಾಮೆಂಟ್ ಮಾಡಿದ್ದಾರೆ. “ತುಂಬಾ ಹೆಮ್ಮೆಯಾಗುತ್ತುದೆ! ಅವರು ನನ್ನ ಅಜ್ಜ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ನಮ್ಮ ಕುಟುಂಬವು ಮಾಜಿ ರಕ್ಷಣಾ ಕಾರ್ಯದರ್ಶಿ ಡಾ ಅಜಯ್ ಕುಮಾರ್, ಐಎಎಸ್ ಅವರಿಗೆ ಋಣಿಯಾಗಿದೆ. ಹಾಗೆಯೇ ಘಟಕ ಮಟ್ಟದಲ್ಲಿ ಕಾರ್ಯಕ್ರಮವನ್ನು ನಡೆಸಿದ ASC ತ್ರಿವೇಂಡ್ರಂಗೆ ಅಭಿನಂದನೆಗಳು!” ಎಂದಿದ್ದಾರೆ
ಅನೇಕ ಬಳಕೆದಾರರು ಭಾರತೀಯ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.