ನವದೆಹಲಿ: ಬಹುಪಕ್ಷೀಯ ಕಾರ್ಯತಂತ್ರ ಮತ್ತು ಕಮಾಂಡ್ ಎಕ್ಸರ್ಸೈಸ್ ವೋಸ್ಟಾಕ್ – 2022 ಇಂದು ರಷ್ಯಾದ ಪೂರ್ವ ಮಿಲಿಟರಿ ಜಿಲ್ಲೆಯ ತರಬೇತಿ ಮೈದಾನದಲ್ಲಿ ಪ್ರಾರಂಭವಾಗಿದೆ.
“ಭಾರತ ಮತ್ತು ರಷ್ಯಾ ಸೇನೆಗಳ ನಡುವಣ ಬಹುಪಕ್ಷೀಯ ಕಾರ್ಯತಂತ್ರ ಮತ್ತು ಕಮಾಂಡ್ ಎಕ್ಸರ್ಸೈಸ್ ವೋಸ್ಟಾಕ್ – 2022 ಇಂದು ರಷ್ಯಾದ ಪೂರ್ವ ಮಿಲಿಟರಿ ಜಿಲ್ಲೆಯ ತರಬೇತಿ ಮೈದಾನದಲ್ಲಿ ಪ್ರಾರಂಭವಾಗಿದೆ. ಇದು ಇದೇ ತಿಂಗಳ 7ರವರೆಗೆ ಮುಂದುವರಿಯಲಿದೆ” ಎಂದು ವರದಿಗಳು ತಿಳಿಸಿವೆ.
ಈ ಸಮರಾಭ್ಯಾಸವು ಭಾಗವಹಿಸುವ ಸೇನಾ ತುಕಡಿಗಳು ಮತ್ತು ವೀಕ್ಷಕರ ನಡುವೆ ಸಂವಹನ ಮತ್ತು ಸಮನ್ವಯವನ್ನು ಗುರಿಯಾಗಿರಿಸಿಕೊಂಡಿದೆ.
7/8 ಗೂರ್ಖಾ ರೈಫಲ್ಸ್ನ ಪಡೆಗಳನ್ನು ಒಳಗೊಂಡಿರುವ ಭಾರತೀಯ ಸೇನಾ ತುಕಡಿಯು ಸಮರಾಭ್ಯಾಸದ ಸ್ಥಳಕ್ಕೆ ಆಗಮಿಸಿದೆ ಮತ್ತು ಮುಂದಿನ ಏಳು ದಿನಗಳಲ್ಲಿ ಜಂಟಿ ಕ್ಷೇತ್ರ ತರಬೇತಿ ವ್ಯಾಯಾಮಗಳು, ಯುದ್ಧ ಚರ್ಚೆಗಳು ಮತ್ತು ಫೈರ್ಪವರ್ ವ್ಯಾಯಾಮಗಳನ್ನು ಕೈಗೊಳ್ಳಲಿದೆ.
ಭಾರತೀಯ ಸೇನಾ ತುಕಡಿಯು ಪ್ರಾಯೋಗಿಕ ಅಂಶಗಳನ್ನು ಹಂಚಿಕೊಳ್ಳಲು ಮತ್ತು ಚರ್ಚೆಗಳು ಮತ್ತು ಯುದ್ಧತಂತ್ರದ ವ್ಯಾಯಾಮಗಳ ಮೂಲಕ ಮೌಲ್ಯೀಕರಿಸಿದ ಡ್ರಿಲ್ಗಳು, ಕಾರ್ಯವಿಧಾನಗಳು ಮತ್ತು ಹೊಸ ತಂತ್ರಜ್ಞಾನದ ಅಭ್ಯಾಸದ ಸಂಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಎದುರು ನೋಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.