News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th September 2022


×
Home About Us Advertise With s Contact Us

1971ರಲ್ಲಿ ತಮಿಳುನಾಡಿನಿಂದ ಕಳವಾದ ಪಾರ್ವತಿ ವಿಗ್ರಹ ನ್ಯೂಯಾರ್ಕ್‌ನಲ್ಲಿ ಪತ್ತೆ

ಚೆನ್ನೈ: ತಮಿಳುನಾಡು ಪೊಲೀಸರ ವಿಗ್ರಹ ವಿಭಾಗವು 1971 ರಲ್ಲಿ ರಾಜ್ಯದ ದೇವಸ್ಥಾನದಿಂದ ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಕೇಂದ್ರಕ್ಕೆ ಕದ್ದು ಕೊಂಡೊಯ್ಯಲಾಗಿದ್ದ ಪಾರ್ವತಿ ದೇವಿಯ ವಿಗ್ರಹವನ್ನು ಪತ್ತೆಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಲೀಸರ ಪ್ರಕಾರ, ಪಾರ್ವತಿ ವಿಗ್ರಹವು ಮೇ 12, 1971 ರಂದು ಕುಂಭಕೋಣಂನ ನಾದನಪುರೇಶ್ವರರ್ ದೇವಸ್ಥಾನದಿಂದ ಕಳ್ಳತನವಾದ ಐದು ವಿಗ್ರಹಗಳ ಭಾಗವಾಗಿದೆ. ಪೊಲೀಸರು ಇದೀಗ ವಿಗ್ರಹವನ್ನು ಹಿಂಪಡೆಯಲು ಮತ್ತು ಯುನೆಸ್ಕೋದ ವರ್ಲ್ಡ್ ಹೆರಿಟೇಜ್ ಕನ್ವೆನ್ಷನ್ 1972 ಅಡಿಯಲ್ಲಿ ಭಾರತಕ್ಕೆ ತರಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಐಡಿ-ಐಡಲ್ ವಿಂಗ್ ಡಿಜಿಪಿ ಜಯಂತ್ ಮುರಳಿ, “ನಾವು ಪುರಾತತ್ವಶಾಸ್ತ್ರಜ್ಞರ ಸಹಾಯವನ್ನು ಕೋರಿದ್ದೇವೆ,  ಪಾಂಡಿಚೇರಿಯ ಫ್ರೆಂಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಇರಿಸಲಾಗಿದ್ದ ಪಾರ್ವತಿಯ ವಿಗ್ರಹದ ಛಾಯಾಚಿತ್ರ ಮತ್ತು ಬೊನ್ಹಾಮ್‌ನಲ್ಲಿ ಮಾರಾಟ ಮಾಡಲಾದ ಪಾರ್ವತಿಯ ವಿಗ್ರಹವನ್ನು ಒಂದೇ ಎಂದು ಅವರು ಹೇಳಿದ್ದಾರೆ.. ಇದರರ್ಥ ಬೊನ್‌ಹಾಮ್ಸ್‌ನಲ್ಲಿರುವ ಪಾರ್ವತಿಯ ವಿಗ್ರಹವು ಕುಂಭಕೋಣಂನಲ್ಲಿರುವ ನಾದನಪುರೇಶ್ವರರ್ ದೇವಸ್ಥಾನಕ್ಕೆ ಸೇರಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top