ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಾಧಾರಿತ ಸಿನಿಮಾ ಶೀಘ್ರದಲ್ಲೇ ಸೆಟ್ಟೇರುತ್ತಿದೆ. ‘ಮೈ ರಹೂ ಯಾ ನಾ ರಹೂ ಯೇ ದೇಶ್ ರೆಹನಾ ಚಾಹಿಯೇ ಅಟಲ್’ ಎಂಬುದು ಈ ಚಿತ್ರದ ಶೀರ್ಷಿಕೆ.
ಲೇಖಕ ಉಲ್ಲೇಖ್ ಎನ್ಪಿ ಅವರ ʼದಿ ಅನ್ಟೋಲ್ಡ್ ವಾಜಪೇಯಿ: ಪೊಲಿಟಿಶಿಯನ್ ಆಂಡ್ ಪ್ಯಾರಡಾಕ್ಸ್ʼ ಪುಸ್ತಕವನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರವು 2023 ರ ವಾಜಪೇಯಿ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಈ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ತಾರಾಗಣ ಇನ್ನೂ ದೃಢಪಟ್ಟಿಲ್ಲ.
ಅಜಾತ ಶತ್ರು ಎಂದೇ ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ ಅವರು 1996 ರಲ್ಲಿ ಭಾರತದ ಪ್ರಧಾನಿಯಾದರು. ಆದರೆ, ಬಹುಮತ ಪಡೆಯಲು ವಿಫಲವಾದ ನಂತರ ಅವರು 13 ದಿನಗಳಲ್ಲಿ ರಾಜೀನಾಮೆ ನೀಡಬೇಕಾಯಿತು. ವಾಜಪೇಯಿ ಅವರು 1998 ಮತ್ತು 1999 ರಲ್ಲಿ ಕ್ರಮವಾಗಿ ಎರಡನೇ ಮತ್ತು ಮೂರನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದರು. ವಾಜಪೇಯಿ ಅವರು ಆಗಸ್ಟ್ 16, 2018 ರಂದು ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾದರು.
FILM ON ATAL BIHARI VAJPAYEE ANNOUNCED: VINOD BHANUSHALI – SANDEEP SINGH TO PRODUCE… #VinodBhanushali and #SandeepSingh join hands to make a film on the epic life story of Shri #AtalBihariVajpayee ji… Titled #MainRahoonYaNaRahoonYehDeshRehnaChahiye – #Atal. pic.twitter.com/LC82GZw3FJ
— taran adarsh (@taran_adarsh) June 28, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.