ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು 89 ನೇ ವಾಯುಪಡೆಯ ದಿನದ ಅಂಗವಾಗಿ ಇಂದು ವಾಯು ಯೋಧರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯು 1932 ರ ಅಕ್ಟೋಬರ್ 8 ರಂದು ಸ್ಥಾಪನೆಗೊಂಡಿತು.
“ಶಾಂತಿ ಮತ್ತು ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯು ತನ್ನ ಸಾಮರ್ಥ್ಯ, ಶಕ್ತಿಯನ್ನು ಸಾಬೀತುಪಡಿಸಿದೆ. ವಾಯು ಸೇನೆಯ ಬಗ್ಗೆ ರಾಷ್ಟ್ರವು ಹೆಮ್ಮೆ ಪಡುತ್ತದೆ. ವಾಯುಸೇನೆ ತನ್ನ ದಕ್ಷತೆಯ ಗುಣಮಟ್ಟವನ್ನು ಮುಂದುವರೆಸಲಿದೆ” ಎಂದು ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
Greetings to air warriors, veterans & their families on Air Force Day. The nation is proud of the Indian Air Force which has proved its competency and capability time and again during peace and war. I am sure the IAF will continue to maintain its cherished standards of excellence
— President of India (@rashtrapatibhvn) October 8, 2021
ವಾಯುಪಡೆಯ ದಿನದಂದು ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಭಾರತೀಯ ವಾಯುಪಡೆಯು ಧೈರ್ಯ, ಶ್ರದ್ಧೆ ಮತ್ತು ವೃತ್ತಿಪರತೆಗೆ ಸಮಾನಾರ್ಥಕವಾಗಿದೆ ಎಂದು ಹೇಳಿದ್ದಾರೆ.
ಟ್ವೀಟ್ನಲ್ಲಿ ಪಿಎಂ ನರೇಂದ್ರ ಮೋದಿ ಅವರು, “ವಾಯುಪಡೆಯ ದಿನದಂದು ನಮ್ಮ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ವಾಯುಪಡೆಯು ಧೈರ್ಯ, ಪರಿಶ್ರಮ ಮತ್ತು ವೃತ್ತಿಪರತೆಗೆ ಸಮಾನಾರ್ಥಕವಾಗಿದೆ. ಅವರು ದೇಶವನ್ನು ರಕ್ಷಿಸುವಲ್ಲಿ ಮತ್ತು ತಮ್ಮ ಮಾನವೀಯ ಮನೋಭಾವದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ” ಎಂದಿದ್ದಾರೆ.
Greetings to our air warriors and their families on Air Force Day. The Indian Air Force is synonymous with courage, diligence and professionalism. They have distinguished themselves in defending the country and through their humanitarian spirit in times of challenges. pic.twitter.com/UbMSOK3agP
— Narendra Modi (@narendramodi) October 8, 2021
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ದಿನದಂದು ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಕೋರಿದರು ಮತ್ತು ವಾಯುಸೇನೆ ರಾಷ್ಟ್ರದ ಸೇವೆಯಲ್ಲಿ ದೃಢವಾಗಿದೆ ಎಂದು ಹೇಳಿದರು.
“ಈ ಅದಮ್ಯ ಪಡೆಯ 89 ನೇ ವಾರ್ಷಿಕೋತ್ಸವದಂದು ಎಲ್ಲಾ ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಮತ್ತು ಅವರ ಕುಟುಂಬಗಳಿಗೆ ಹಾರ್ದಿಕ ಶುಭಾಶಯಗಳು. ವಿವಿಧ ಸವಾಲುಗಳಿಗೆ ಅಚಲತೆ ಮತ್ತು ಸ್ಥಿತಿಸ್ಥಾಪಕತ್ವದಿಂದ ಸ್ಪಂದಿಸುತ್ತಿರುವುದಕ್ಕಾಗಿ ಮತ್ತು ರಾಷ್ಟ್ರದ ಸೇವೆಯಲ್ಲಿ ಸ್ಥಿರವಾಗಿರುವ ನಮ್ಮ ವಾಯು ಯೋಧರ ಬಗ್ಗೆ ಹೆಮ್ಮೆ ಇದೆ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
Greetings and warm wishes to all #IndianAirForce personnel & their families on the 89th anniversary of this indomitable force. We are proud of our airwarriors for responding to varied challenges with alacrity and resilience & being steadfast in the service to the Nation. @IAF_MCC pic.twitter.com/gnpbrKJoL8
— Rajnath Singh (@rajnathsingh) October 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.