ನವದೆಹಲಿ: ಕಲ್ಲಿದ್ದಲು ವಲಯದಲ್ಲಿ ಸುಧಾರಣೆಯನ್ನು ತರುವ ಗುರಿಯಿಟ್ಟಿರುವ ಕೇಂದ್ರ ಕಲ್ಲಿದ್ದಲು ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷ 2021-22 ರ ಅಜೆಂಡಾ ಡಾಕ್ಯುಮೆಂಟ್ ಅನ್ನು ಅಂತಿಮಗೊಳಿಸಿದೆ. ಈ ಡಾಕ್ಯುಮೆಂಟ್ ಮುಖ್ಯವಾಗಿ ಕಲ್ಲಿದ್ದಲು ವಲಯದ ಸುಧಾರಣೆಗಳು, ಪರಿವರ್ತನೆ ಮತ್ತು ಸುಸ್ಥಿರತೆ, ಸಂಸ್ಥೆ ನಿರ್ಮಾಣ ಮತ್ತು ಭವಿಷ್ಯದ ಕಾರ್ಯಸೂಚಿ ಸೇರಿದಂತೆ ನಾಲ್ಕು ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.
ಇದಲ್ಲದೆ, ಸಚಿವಾಲಯವು 2024 ರ ವೇಳೆಗೆ 1 ಬಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಉತ್ಪಾದನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಅದರ ಜೊತೆಯಲ್ಲಿ, ಮೇಲ್ವಿಚಾರಣೆ ಮತ್ತು ಪರಿಶೀಲನೆ ಚೌಕಟ್ಟನ್ನು ಸಹ ವಿನ್ಯಾಸಗೊಳಿಸಲಾಗಿದೆ.
ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಈ ಡಾಕ್ಯುಮೆಂಟ್ ಅನ್ನು ಮೊದಲ ಬಾರಿಗೆ 2021-22ರ ಹಣಕಾಸು ವರ್ಷದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಸಂಕಲನದ ರೂಪದಲ್ಲಿ ಹೊರತರಲಾಗಿದೆ.
ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆಯ ಬಗ್ಗೆ ಹೇಳುವುದಾದರೆ ಕೋಲ್ ಇಂಡಿಯಾ ಲಿಮಿಟೆಡ್ ಈಗಾಗಲೇ 117.6 ಮಿಲಿಯನ್ ಟನ್ಗಳನ್ನು ವಿದ್ಯುತ್ ಯುಟಿಲಿಟಿಗಳಿಗೆ 2021 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪೂರೈಸಿದೆ. ಇದು 12.3% ಬೆಳವಣಿಗೆಯೊಂದಿಗೆ ಇದುವರೆಗಿನ ಅತ್ಯಧಿಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.