ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ಡ್ರೋನ್ ಕರಡು ನಿಯಮಗಳನ್ನು ಪ್ರಕಟಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ಮಾನವ ರಹಿತ ವೈಮಾನಿಕ ವ್ಯವಸ್ಥೆ ನಿಯಮಗಳ ಬದಲಾಗಿ ಸದ್ಯ ಹೊಸದಾಗಿ ಪ್ರಕಟಿಸಲಾದ ಕರಡು ನಿಯಮಗಳು ಜಾರಿಗೆ ಬರಲಿವೆ. ಈ ಕರಡು ನಿಯಮಗಳನ್ನು ಪರಿಶೀಲಿಸಿ ಸಾರ್ವಜನಿಕರು ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಲು ಅವಕಾಶ ಇರುವುದಾಗಿಯೂ ಸಚಿವಾಲಯ ಹೇಳಿದೆ.
ಹೊಸ ನಿಯಮಗಳನ್ವಯ ವಿಶಿಷ್ಟ ಅನುಮತಿ ಸಂಖ್ಯೆ, ವಿಶಿಷ್ಟ ಫೋಟೋ ಟೈಪ್ ಗುರುತಿನ ಸಂಖ್ಯೆ, ದೃಢೀಕರಣ ಪ್ರಮಾಣಪತ್ರ, ಆಮದು ಮಾಡಿಕೊಳ್ಳಲಾದ ಡ್ರೋನ್ ಆಗಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳು, ಕಾರ್ಯಾಚರಣೆಗೆ.ಅನುಮೋದನೆ, ವಿದ್ಯಾರ್ಥಿಗಳಿಗೆ ರಿಮೋಟ್ ಪೈಲಟ್ ಲೈಸನ್ಸ್ ನೀಡುವುದು ಸೇರಿದಂತೆ ಹಲವು ನಿಯಮಗಳು ಮುಂದಿನ ದಿನಗಳಲ್ಲಿ ಅಸ್ಥಿತ್ವದಲ್ಲಿರುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಬದಲಾಗಿ ವಾಯುಸ್ಥಳದ ನಿರ್ವಹಣೆಗೆ ಒತ್ತು ನೀಡಲಾಗುತ್ತದೆ. ಅದರಂತೆ ಭಾರತದ ವಾಯುಗಡಿಯೊಳಗೆ ಕೆಂಪು, ಹಳದಿ ಮತ್ತು ಹಸಿರು ವಲಯಗಳನ್ನು ವಿಂಗಡಿಸಲಾಗುತ್ತದೆ. ಡಿಜಿಟಲ್ ಸ್ಕೈ ರೂಪದಲ್ಲಿ ಇದನ್ನು ಮುಕ್ತವಾಗಿ ಪ್ರದರ್ಶಿಸಲಾಗುತ್ತದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ನಿರ್ವಹಿಸುವ ಡಿಜಿಟಲ್ ಸ್ಕೈ ಫ್ಲ್ಯಾಟ್ ಫಾರ್ಮ್ನಲ್ಲಿ ಡ್ರೋಣ್ ಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ತಿಳಿಯಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.