ಹೈದರಾಬಾದ್: ಕೊರೋನಾ ಸಾಂಕ್ರಾಮಿಕ ಮಾನವ ಕುಲದ ಅತೀ ದೊಡ್ಡ ಆಪತ್ತು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಸಿಡಬ್ಲ್ಯುಎ ನ ಆಡಳಿತ ಮಂಡಳಿಯ 19 ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ನಂತರದಲ್ಲಿ ಅದು ದೇಶದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಭಾರತೀಯ ಕಾರ್ಯತಂತ್ರ ಮತ್ತು ಶೈಕ್ಷಣಿಕ ಸಮುದಾಯ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು. ಹಾಗೆಯೇ ಸಂಸ್ಥೆಯ ಸಮಾಲೋಚನೆ ಮತ್ತು ಸಂಶೋಧನೆಗಳಲ್ಲಿ ಕೊರೋನಾ ಸಂಬಂಧಿಸಿದಂತೆಯೂ ಬೆಳಕು ಚೆಲ್ಲಿರುವುದು ತೃಪ್ತಿ ನೀಡಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕದ ನಡುವೆಯೂ ಸಂಸ್ಥೆ ಉತ್ತಮವಾದ ಕಾರ್ಯಗಳನ್ನು ನಿರ್ವಹಿಸಿದೆ. ಕಳೆದ ಏಳು ತಿಂಗಳಲ್ಲಿ ಹಲವು ಸಂಶೋಧನಾ ಚಟುವಟಿಕೆಗಳು, ಉಪನ್ಯಾಸ, ಚರ್ಚೆ ಮೊದಲಾದವುಗಳನ್ನು ನಡೆಸಿದ್ದು, ಈ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.