ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಯು ಮೋದಿ ಸರ್ಕಾರದ ‘ಮೊದಲ ಆದ್ಯತೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಶೇಕಡಾ 90 ರಷ್ಟು ತಲುಪುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
“ಪ್ರಧಾನ ಮಂತ್ರಿಯವರ ಅಭಿವೃದ್ಧಿ ಪ್ಯಾಕೇಜ್, ಪ್ರಮುಖ ಮತ್ತು ಅಪ್ರತಿಮ ಯೋಜನೆಗಳು ಮತ್ತು ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ಕಣಿವೆಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಿದ ಬಗ್ಗೆ ಗೃಹ ಸಚಿವರು ಪ್ರಭಾವಿತರಾಗಿದ್ದಾರೆ” ಎಂದು ಗೃಹ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪಶ್ಚಿಮ ಪಾಕಿಸ್ಥಾನ, ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಮತ್ತು ಕಾಶ್ಮೀರದಿಂದ ಜಮ್ಮುವಿಗೆ ವಲಸೆ ಹೋದ ಎಲ್ಲರಿಗೂ ನಿರಾಶ್ರಿತರ ಪ್ಯಾಕೇಜ್ನ ಪ್ರಯೋಜನಗಳನ್ನು ಖಚಿತಪಡಿಸುವಂತೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
जम्मू-कश्मीर का सर्वांगीण विकास मोदी सरकार की सर्वोच्च प्राथमिकता है।
आज इसी क्रम में बैठक कर जम्मू-कश्मीर में हो रहे विकास कार्यों की समीक्षा की व संबंधित विभागों को जम्मू-कश्मीर में विकास की गति को और तीव्र करने के दिशा-निर्देश दिए। https://t.co/Jxzoabxc5p pic.twitter.com/muTD0BjqAw
— Amit Shah (@AmitShah) June 18, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.