ನವದೆಹಲಿ: ಪೋಲೆಂಡ್ ಓಪನ್ನಲ್ಲಿ ನಡೆದ ಮಹಿಳೆಯರ 53 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಚಿನ್ನದ ಪದಕ ಗೆದಿದ್ದಾರೆ.
ವಾರ್ಸಾದಲ್ಲಿ ನಡೆದ ಪೋಲೆಂಡ್ ರ್ಯಾಕಿಂಗ್ ಸರಣಿಯಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಉಕ್ರೇನ್ನ ಕ್ರಿಸ್ಟೈನಾ ಬೆರೆಜಾ ವಿರುದ್ಧ 8-0 ಅಂತರದಿಂದ ಅವರು ಚಿನ್ನ ಗೆದ್ದರು.
ವಿನೇಶ್ ಫೋಗಟ್ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವ ಕುಸ್ತಿಪಟುವಾಗಿದ್ದಾರೆ. ಒಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಗಲು 50 ದಿನಗಳಿಗಿಂತಲೂ ಕಡಿಮೆ ದಿನಗಳಿದ್ದು, ಈ ಸಂದರ್ಭದಲ್ಲಿ ಅವರು ಪ್ರತಿದಾಳಿಗಳಲ್ಲಿ ದೃಢವಾಗಿ ಕಾಣುತ್ತಿರುವುದು ಆಶಾದಾಯಕವಾಗಿದೆ.
ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ಸ್ನಲ್ಲಿ 53 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ವಿನೇಶ್ ಅವರ ಚಿನ್ನ ಗೆಲ್ಲುವ ಆಶಾವಾದ ಇಟ್ಟುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.