News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದುವರೆಗೆ 1,094 ಟನ್ ಆಮ್ಲಜನಕವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ ರೈಲ್ವೆ

ನವದೆಹಲಿ: ರೈಲ್ವೆ ಇದುವರೆಗೆ 1,094 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.

19 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು ಈಗಾಗಲೇ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ಇನ್ನೂ ಎರಡು ಲೋಡೆಡ್  ಆಕ್ಸಿಜನ್ ಎಕ್ಸ್‌ಪ್ರೆಸ್ 61 ಟನ್‌ಗಳಿಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ಹೊತ್ತೊಯ್ಯುತ್ತಿದೆ‌ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ .

ದೆಹಲಿಯು ತನ್ನ 2 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಅನ್ನು ಸ್ವೀಕರಿಸಿದ್ದು, ಪಶ್ಚಿಮ ಬಂಗಾಳದಿಂದ 120 ಟನ್ ದ್ರವ ವೈದ್ಯಕೀಯ ಆಮ್ಲಜನಕ ಅಲ್ಲಿಗೆ ತಲುಪಿದೆ.  3 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಈಗಾಗಲೇ ಅಂಗುಲ್‌ನಿಂದ ದೆಹಲಿಗೆ ಸುಮಾರು 31 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ಪ್ರಯಾಣವನ್ನು ಪ್ರಾರಂಭಿಸಿದೆ. ತೆಲಂಗಾಣವು ತನ್ನ ಮೊದಲ ಆಮ್ಲಜನಕ ಎಕ್ಸ್‌ಪ್ರೆಸ್‌ ಅನ್ನು ಸ್ವೀಕರಿಸಿದ್ದು, ಅಂಗುಲ್‌ನಿಂದ 63.6 ಟನ್ ಆಮ್ಲಜನಕವನ್ನು ಸ್ವೀಕರಿಸಿದೆ.

ರೈಲ್ವೆ ಇದುವರೆಗೆ 174 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಮಹಾರಾಷ್ಟ್ರಕ್ಕೆ, 430 ಟನ್‌ಗಿಂತ ಹೆಚ್ಚು ಉತ್ತರ ಪ್ರದೇಶಕ್ಕೆ, ಮಧ್ಯಪ್ರದೇಶಕ್ಕೆ 157 ಟನ್, ದೆಹಲಿಗೆ 190 ಟನ್, ಹರಿಯಾಣಕ್ಕೆ 79 ಟನ್ ಮತ್ತು ತೆಲಂಗಾಣಕ್ಕೆ 63 ಟನ್‌ ಆಮ್ಲಜನಕವನ್ನು ತಲುಪಿಸಿದೆ ಎಂದು ಸಚಿವಾಲಯ ತಿಳಿಸಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top