ನವದೆಹಲಿ: ಭಾರತದಲ್ಲಿ ಈಗ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಬಳಕೆಗೆ ಅನುಮೋದಿಸಲಾಗಿದೆ. ಕೋವಿಡ್-19 ವಿರುದ್ಧ 91.6% ಪರಿಣಾಮಕಾರಿತ್ವ ಮತ್ತು ತೀವ್ರ ಮತ್ತು ಮಧ್ಯಮ ರೋಗಲಕ್ಷಣಗಳ ವಿರುದ್ಧ 100% ಪರಿಣಾಮಕಾರಿತ್ವವನ್ನು ಇದು ಹೊಂದಿದೆ.
ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಅನುಮೋದಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಿಸಲಾಗಿದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಹೊರತುಪಡಿಸಿ, ಸ್ಪುಟ್ನಿಕ್ ವಿ ರಾಷ್ಟ್ರದಲ್ಲಿ ಅನುಮೋದನೆ ಪಡೆದ ಮೂರನೇಯ ಲಸಿಕೆ ಆಗಿದೆ.
ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ನ ಕೋವಿಡ್-19 ಲಸಿಕೆಯಾದ ಭಾರತ ನಿರ್ಮಿತ ಕೋವಿಶೀಲ್ಡ್ನಂತೆಯೇ, ಸ್ಪುಟ್ನಿಕ್ ವಿ ಸಹ ಸಾಮಾನ್ಯ ಶೀತ ವೈರಸ್ನ ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.