News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್‌ ಸಂದರ್ಭದಲ್ಲಿ ರೈಲ್ವೆ ನೌಕರರ ಸೇವೆಯನ್ನು ಕೊಂಡಾಡಿ ಪತ್ರ ಬರೆದ ಗೋಯಲ್

ನವದೆಹಲಿ:  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕರ್ತವ್ಯ ನಿರ್ವಹಿಸಿದ ಸುಮಾರು 13 ಲಕ್ಷ ರೈಲು ನೌಕರರಿಗೆ  ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಧನ್ಯವಾದ ಹೇಳಿದ್ದಾರೆ. “ಅನಿಶ್ಚಿತ ಸಾಂಕ್ರಾಮಿಕದಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮಲು ರೈಲ್ವೆ ಕುಟುಂಬದ ಕಠಿಣ ಶ್ರಮ, ದೃಢನಿಶ್ಚಯ ಮತ್ತು ಸಂಕಲ್ಪ ಕಾರಣ” ಎಂದು ರೈಲು ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅನುಭವಿಸಿದನ್ನು ಹಿಂದೆ ಯಾವತ್ತೂ ಅನುಭವಿಸಿಲ್ಲ ಎಂದು ಹೇಳಿದ್ದಾರೆ.

“ನಮಗೆ ಆದ ನಷ್ಟವನ್ನು ಎಂದಿಗೂ ಮರೆಯಲಾಗದು,  ಸಾಂಕ್ರಾಮಿಕದ ಹಿನ್ನೆಲೆಯಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮಲು ರೈಲು ಪರಿವಾರದ ಕಠಿಣ ಶ್ರಮ, ದೃಢನಿಶ್ಚಯ ಮತ್ತು ಸಂಕಲ್ಪ ಕಾರಣವಾಗಿದೆ” ಎಂದಿದ್ದಾರೆ.

ಈ ಕಠಿಣ ಸಮಯದಲ್ಲು “ರೈಲ್ವೆ ಕುಟುಂಬ” ಎಂದಿನಂತೆ ಸಂಪೂರ್ಣ ಭಕ್ತಿಯಿಂದ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದರು. “ಜಗತ್ತು ಸ್ಥಗಿತಗೊಂಡಿದ್ದರೂ, ರೈಲ್ವೆ ನೌಕರರು ಒಂದು ದಿನವೂ ರಜೆ ತೆಗೆದುಕೊಳ್ಳಲಿಲ್ಲ, ಮತ್ತು ಆರ್ಥಿಕತೆಯ ಚಕ್ರಗಳನ್ನು ಚಲಿಸುವಂತೆ ಮಾಡಲು ವೈಯಕ್ತಿಕ ಅಪಾಯವನ್ನು ಲೆಕ್ಕಿಸದೆ ಇನ್ನೂ ಹೆಚ್ಚು ಶ್ರಮಿಸಿದರು” ಎಂದು ಅವರು ಹೇಳಿದ್ದಾರೆ.

ರೈಲ್ವೆ ನೌಕರರ ಸಂಪೂರ್ಣ ಇಚ್ಛಾಶಕ್ತು ಮತ್ತು ಸ್ಥಿರತೆಯಿಂದಾಗಿ ನಾವು ಈ ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿದ್ದೇವೆ ಎಂದಿದ್ದಾರೆ.

“ಈ ಅಸಾಮಾನ್ಯ ಕಾಲದಲ್ಲಿ 4,621 ಶ್ರಮಿಕ ಸ್ಪೆಷಲ್ ರೈಲುಗಳು 63 ಲಕ್ಷಕ್ಕೂ ಹೆಚ್ಚು ಸಿಲುಕಿದ ನಾಗರಿಕರನ್ನು ಅವರ ಕುಟುಂಬಗಳೊಂದಿಗೆ ಸೇರಿಸಲು ಸಹಾಯ ಮಾಡಿದೆ. ಕಿಸಾನ್ ರೈಲು ಸೇವೆಗಳು ನಮ್ಮ ಅನ್ನದಾತರನ್ನು ನೇರವಾಗಿ ದೊಡ್ಡ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಮಾಧ್ಯಮವಾಯಿತು. ನೀವು, ನಿಮ್ಮ ಸೇವೆಯ ಮೂಲಕ ಇದನ್ನು ಸಾಧ್ಯವಾಗಿಸಿದ್ದೀರಿ ಮತ್ತು ಪ್ರತಿಯಾಗಿ, ಲಕ್ಷಾಂತರ ಜನರ ಹೃದಯ ಮತ್ತು ಜೀವನವನ್ನು ಮುಟ್ಟಿದ್ದೀರಿ”ಎಂದು ರೈಲ್ವೆ ಸಚಿವರು  ನೌಕರರಿಗೆ ಹೇಳಿದ್ದಾರೆ.

“ರೈಲ್ವೆ ತನ್ನ ಆದರ್ಶಪ್ರಾಯವಾದ ಕೆಲಸದಿಂದ ಆರ್ಥಿಕ ಚೇತರಿಕೆಗೆ ಮುಂದಾಗಿದೆ ಎಂಬುದು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ” ಎಂದು ಅವರು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top