ನವದೆಹಲಿ: ದೇಶದಲ್ಲಿ ಇನ್ನೂ ಏಳು ಕೋವಿಡ್ -19 ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಸುಮಾರು 24 ಲಸಿಕೆಗಳು ಪೂರ್ವ-ಪ್ರಾಯೋಗಿಕ ಪರೀಕ್ಷೆಯ ಹಂತದಲ್ಲಿವೆ ಎಂದಿದ್ದಾರೆ.
ಫೆಬ್ರವರಿಯಿಂದ ಭಾರತ ಕ್ರಮೇಣ ಎರಡನೇ ಅಲೆಯ ಸೋಂಕುಗಳಿಗೆ ಸಾಕ್ಷಿಯಾಗುತ್ತಿದ್ದು, ಇದು ಆತಂಕವನ್ನು ಸೃಷ್ಟಿ ಮಾಡಿದೆ. ಹೀಗಾಗಿ ಭಾರತ ತನ್ನ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿ ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಸಿಗುವಂತೆ ಮಾಡಲು ಪ್ರಯತ್ನ ನಡೆಸುತ್ತಿದೆ.
“ಸುಮಾರು ಏಳು ಕೋವಿಡ್ ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿವೆ. ಅವುಗಳಲ್ಲಿ ಕೆಲವು ಪ್ರಯೋಗಗಳ ಮುಂದುವರಿದ ಹಂತದಲ್ಲಿವೆ. ಸುಮಾರು 24 ಲಸಿಕೆಗಳು ಪೂರ್ವ-ಕ್ಲಿನಿಕಲ್ ಪ್ರಯೋಗಗಳಲ್ಲಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಆದರೆ ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸುವುದನ್ನು ನಾವು ಮರೆಯಬಾರದ ”ಎಂದು ಸಚಿವರು ಹೇಳಿದ್ದಾರೆ.
“ಪ್ರಸ್ತುತ ಜನರಿಗೆ ನೀಡಲಾಗುತ್ತಿರುವ ಭಾರತೀಯ ಎರಡೂ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ. ಲಸಿಕೆಗಳ ಬಗ್ಗೆ ಇನ್ನೂ ಬಹಳಷ್ಟು ಜನರಿಗೆ ಅನುಮಾನಗಳಿವೆ. ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಪ್ರಸಾರವಾಗುತ್ತಿರುವ ವದಂತಿಗಳನ್ನು ನಂಬಬೇಡಿ ಎಂದು ನಾನು ಅವರನ್ನು ಕೋರುತ್ತೇನೆ” ಎಂದಿದ್ದಾರೆ.
ಲಸಿಕೆ ತೆಗೆದುಕೊಂಡ ನಂತರ ವ್ಯಕ್ತಿಗಳು ವೈರಸ್ಗೆ ತುತ್ತಾದ ಕೆಲವು ಪ್ರಕರಣಗಳಿವೆ. ಆದರೆ, ಅಂತಹ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮತ್ತು ಐಸಿಯು ವಾರ್ಡ್ಗಳಿಗೆ ಪ್ರವೇಶ ಪಡೆಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ಅವರು ವಿವರಿಸಿದ್ದಾರೆ. ಗಮನಾರ್ಹವಾಗಿ, ಮಾರ್ಚ್ 30 ರ ಬೆಳಿಗ್ಗೆ 8 ರ ಹೊತ್ತಿಗೆ ಭಾರತವು 6,11,13,354 ಲಸಿಕೆ ಡೋಸ್ ಅನ್ನು ನೀಡಿದೆ, ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಭಾರತ ಮುನ್ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.