ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಉಗ್ರ ಅಡಗು ತಾಣವನ್ನು ಭದ್ರತಾ ಪಡೆಗಳು ಧ್ವಂಸ ಮಾಡಿವೆ.
ಅವಂತಿಪೋರಾ ಪೊಲೀಸರು ಸೇನೆಯ 42 ಆರ್ಆರ್ ಮತ್ತು ಸಿಆರ್ಪಿಎಫ್ನ 180 ಬಿಎನ್ ಜೊತೆ ಸೇರಿ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದ ಸೀರ್-ಪಸ್ತೂನಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕ ಅಡಗುತಾಣವನ್ನು ಭೇದಿಸಿದ್ದಾರೆ.
ಜಂಟಿ ತಂಡವು ಈ ಪ್ರದೇಶದಲ್ಲಿ ನಡೆಸಿದ ಶೋಧದ ಸಮಯದಲ್ಲಿ, ಭದ್ರತಾ ಪಡೆಯು ಭಯೋತ್ಪಾದಕ ಸಂಘಟನೆಯ ಹಿಜ್ಬುಲ್ ಮುಜಾಹಿದ್ದೀನ್ನ ಒಂದು ಅಡಗುತಾಣವನ್ನು ಭೇದಿಸಿ ನಂತರ ಅದನ್ನು ನಾಶಪಡಿಸಿತು.
ಭಯೋತ್ಪಾದಕ ಸಂಘಟನೆಗೆ ಸೇರಿದ ವಿಧ್ವಂಸಕ ವಸ್ತುಗಳು ಮತ್ತು ಪಾತ್ರೆಗಳಂತಹ ಇತರ ವಸ್ತುಗಳನ್ನು ಸಹ ಅಡಗುತಾಣದಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ತನಿಖೆಯ ಉದ್ದೇಶಕ್ಕಾಗಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.