ಲಕ್ನೋ: ರಾಮ ಮಂದಿರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಅಯೋಧ್ಯೆಯ 70 ಎಕರೆ ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ 676.85 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳವಾರ ಖರೀದಿಸಿದೆ. ಸಂಕೀರ್ಣ ಪ್ರದೇಶವನ್ನು ವಿಸ್ತಾರವಾಗಿ 107 ಎಕರೆಗೆ ವಿಸ್ತರಿಸಲು ದೇವಾಲಯದ ಟ್ರಸ್ಟ್ 1 ಕೋಟಿ ರೂಪಾಯಿಗೆ ಭೂಮಿ ಖರೀದಿಸಿದೆ.
ಸ್ಥಳೀಯ ಮೂಲಗಳ ಪ್ರಕಾರ, ದೇವಾಲಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಜಮೀನು ಮಾಲೀಕ ಸ್ವಾಮಿ ದೀಪ್ ನಾರಾಯಣ್ ಅವರಿಂದ 1 ಕೋಟಿ ರೂ. ಗೆ ಭೂಮಿ ಖರೀದಿ ಮಾಡಿ ಮಂಗಳವಾರ ಜಮೀನಿನ ನೋಂದಣಿ ಮಾಡಿಸಿದ್ದಾರೆ. ಈ ಜಮೀನು ಪ್ರಸಿದ್ಧ ಆಶರ್ಫಿ ಭವನದ ಪಕ್ಕದಲ್ಲಿದೆ.
ಬಿಜೆಪಿಯ ಗೋಸಿಂಗಂಜ್ ಶಾಸಕ ಐಪಿ ತಿವಾರಿ ಮತ್ತು ದೇವಾಲಯದ ಟ್ರಸ್ಟ್ ಸದಸ್ಯ ಮತ್ತು ಆರ್ಎಸ್ಎಸ್ ಅಯೋಧ್ಯಾ ಪ್ರಚಾರಕ್ ಡಾ. ಅನಿಲ್ ಮಿಶ್ರಾ ಅವರು ಭೂ ವ್ಯವಹಾರಕ್ಕಾಗಿ ನೋಂದಾವಣೆ ಪತ್ರಗಳಿಗೆ ಸಹಿ ಹಾಕಿದ ಸಾಕ್ಷಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಭೂ ಖರೀದಿಯು ತನ್ನ ಪ್ರದೇಶವನ್ನು ವಿಸ್ತರಿಸಲು ದೇವಾಲಯ ಸಂಕೀರ್ಣದ ಗಡಿಯ ಪಕ್ಕದಲ್ಲಿರುವ ಜಮೀನುಗಳು ಮತ್ತು ಹಳೆಯ ಮನೆಗಳನ್ನು ಖರೀದಿಸುವ ಟ್ರಸ್ಟ್ನ ಯೋಜನೆಯ ಭಾಗವಾಗಿತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.