ಅಹ್ಮದಾಬಾದ್: ಗುಜರಾತ್ನಲ್ಲಿ ಅಹಮದಾಬಾದ್ ಸೇರಿದಂತೆ ಆರು ಮಹಾನಗರ ಪಾಲಿಕೆಗಳಿಗೆ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಜಯ ಸಾಧಿಸಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆರು ಪುರಸಭೆಗಳ ಒಟ್ಟು 575 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ ಹತ್ತಿರ ಹತ್ತಿರ 300 ಸ್ಥಾನಗಳನ್ನು ಗೆದ್ದಿದ್ದರೆ, 17 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಬಹುಜನ ಸಮಾಜ ಪಕ್ಷವೂ 3 ಸ್ಥಾನಗಳೊಂದಿಗೆ ಖಾತೆ ತೆರೆದಿದ್ದರೆ, ಆಮ್ ಆದ್ಮಿ ಪಕ್ಷಕ್ಕೆ 4 ಸ್ಥಾನಗಳು ದೊರೆತಿವೆ.
ಬಿಜೆಪಿ ಅಹಮದಾಬಾದ್ನಲ್ಲಿ 24, ವಡೋದರಾದಲ್ಲಿ 17, ರಾಜ್ಕೋಟ್ ಮತ್ತು ಜಮ್ನಗರದಲ್ಲಿ ತಲಾ 16, ಭಾವನಗರದಲ್ಲಿ 11 ಮತ್ತು ಸೂರತ್ ಮಹಾನಗರ ಪಾಲಿಕೆಯಲ್ಲಿ 4 ಸ್ಥಾನಗಳನ್ನು ಗೆದ್ದಿದೆ. ಹಲವು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ ಮತ್ತೊಂದೆಡೆ, ಪ್ರತಿಪಕ್ಷ ಕಾಂಗ್ರೆಸ್ ವಡೋದರಾದಲ್ಲಿ 7 ಸ್ಥಾನಗಳನ್ನು ಪಡೆದಿದ್ದರೆ, ಭಾವನಗರ ಮತ್ತು ಜಮ್ನಗರದಲ್ಲಿ ತಲಾ ಒಂದು ಸ್ಥಾನಗಳನ್ನು ಪಡೆದಿದೆ.
ಸಂಪೂರ್ಣ ಫಲಿತಾಂಶ ಲಭ್ಯವಾಗಿಲ್ಲ.
ಸೂರತ್, ಅಹಮದಾಬಾದ್, ವಡೋದರಾ, ಜಮ್ನಗರ, ಭಾವನಗರ ಮತ್ತು ರಾಜ್ಕೋಟ್ ಸೇರಿದಂತೆ ಆರು ಪುರಸಭೆಗಳಿಗೆ ಫೆಬ್ರವರಿ 21 ರಂದು ಮತದಾನ ನಡೆಸಲಾಯಿತು.
“ಗುಜರಾತ್ನ ಎಲ್ಲಾ ಆರು ಪುರಸಭೆಗಳ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಈ ಯಶಸ್ಸಿಗೆ ಆರು ಮಹಾನಗರ ಪಾಲಿಕೆಗಳ ಮತದಾರರಿಗೆ, ಮುಖ್ಯಮಂತ್ರಿ ವಿಜಯ್ ರೂಪಾನಿ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.