ಶ್ರೀನಗರ: ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ 100 ಅಡಿ ಎತ್ತರದ ರಾಷ್ಟ್ರೀಯ ಧ್ವಜವನ್ನು ಸ್ಥಾಪಿಸಲು ಭಾರತೀಯ ಸೇನೆಯು ಯೋಜಿಸುತ್ತಿದೆ. ಕಣಿವೆಯ ಅತೀ ಎತ್ತರದ ತ್ರಿವರ್ಣ ಧ್ವಜವಾಗಲಿರುವ ಈ ಧ್ವಜಕ್ಕೆ ಈಗಾಗಲೇ ಅಡಿಪಾಯ ಹಾಕಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೇನೆಯ ಅಧಿಕಾರಿಯೊಬ್ಬರು, ಸೋಲಾರ್ ಇಂಡಸ್ಟ್ರಿ ಇಂಡಿಯಾದ ಸಹಯೋಗದೊಂದಿಗೆ ಗುಲ್ಮಾರ್ಗ್ನಲ್ಲಿ 100 ಅಡಿ ಎತ್ತರದಲ್ಲಿರುವ ‘ಐಕಾನಿಕ್ ರಾಷ್ಟ್ರೀಯ ಧ್ವಜ’ ವನ್ನು ಸ್ಥಾಪಿಸಲಾಗುತ್ತದೆ ಎಂಬುದನ್ನು ದೃಢಪಡಿಸಿದರು.
ಗುಲ್ಮಾರ್ಗ್ನ ಪ್ರಸಿದ್ಧ ಸ್ಕೀ-ರೆಸಾರ್ಟ್ನಲ್ಲಿ ಅಗರ್ ಡಿವಿಷನ್ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ವೀರೇಂದ್ರ ವ್ಯಾಟ್ಸ್ ಅವರು ಧ್ವಜಕ್ಕೆ ಅಡಿಪಾಯ ಹಾಕಿದ್ದಾರೆ.
ಜನರಲ್ ವ್ಯಾಟ್ಸ್ ಅವರೊಂದಿಗೆ ಬಾಲಿವುಡ್ ನಟ / ನಿರ್ಮಾಪಕ ಅರ್ಬಾಜ್ ಖಾನ್ ಮತ್ತು ನಟಿ ವಿದ್ಯಾ ಬಾಲನ್ ಇದ್ದರು.
ಸುಮಾರು 9,000 ಅಡಿ ಎತ್ತರದಲ್ಲಿ ಹಾರುವ ಈ ಧ್ವಜ ಕಾಶ್ಮೀರ ಕಣಿವೆಯಲ್ಲಿನ ಭಾರತದ ಅತ್ಯುನ್ನತ ರಾಷ್ಟ್ರೀಯ ಧ್ವಜವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.