ವಾಷಿಂಗ್ಟನ್: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2021 ರಲ್ಲಿ ಭಾರತಕ್ಕೆ ಶೇಕಡಾ 11.5 ರಷ್ಟು ಬೆಳವಣಿಗೆಯ ದರವನ್ನು ನಿರೀಕ್ಷಿಸಿದೆ, ಇದು ಭಾರತವನ್ನು ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ಈ ವರ್ಷ ದ್ವಿ-ಅಂಕಿಯ ಬೆಳವಣಿಗೆಯನ್ನು ದಾಖಲಿಸಿದ ವಿಶ್ವದ ಏಕೈಕ ಪ್ರಮುಖ ಆರ್ಥಿಕತೆಯನ್ನಾಗಿಸಲಿದೆ.
ಮಂಗಳವಾರ ಬಿಡುಗಡೆಯಾದ ಇತ್ತೀಚಿನ ವಿಶ್ವ ಆರ್ಥಿಕ ಔಟ್ಲುಕ್ ಅಪ್ಡೇಟ್ನಲ್ಲಿ ಭಾರತಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಬೆಳವಣಿಗೆಯ ಊಹೆಗಳು ಆರ್ಥಿಕತೆಯಲ್ಲಿ ಬಲವಾದ ಮರುಚೇತರಿಕೆಯನ್ನು ಪ್ರತಿಬಿಂಬಿಸಿವೆ, ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಶೇಕಡಾ ಎಂಟು ರಷ್ಟು ಆರ್ಥಿಕತೆ ಕುಸಿತ ಕಂಡಿತ್ತು.
ತನ್ನ ಇತ್ತೀಚಿನ ಅಪ್ಡೇಟ್ನಲ್ಲಿ, ಐಎಂಎಫ್ 2021 ರಲ್ಲಿ ಭಾರತಕ್ಕೆ ಶೇಕಡಾ 11.5 ರಷ್ಟು ಬೆಳವಣಿಗೆಯ ದರವನ್ನು ನಿರೀಕ್ಷಿಸಿದೆ. ಇದು 2021 ರಲ್ಲಿ ದ್ವಿ-ಅಂಕಿಯ ಬೆಳವಣಿಗೆಯನ್ನು ದಾಖಲಿಸಿದ ವಿಶ್ವದ ಏಕೈಕ ಪ್ರಮುಖ ಆರ್ಥಿಕತೆಯಾಗಲಿದೆ. 2021 ರಲ್ಲಿ ಚೀನಾ 8.1 ಶೇಕಡಾ ಬೆಳವಣಿಗೆಯೊಂದಿಗೆ ನಂತರದ ಸ್ಥಾನದಲ್ಲಿದೆ ಮತ್ತು ಸ್ಪೇನ್ (5.9 ಶೇಕಡಾ) ಮತ್ತು ಫ್ರಾನ್ಸ್ (5.5 ಶೇಕಡಾ) ಬಳಿಕದ ಸ್ಥಾನದಲ್ಲಿದೆ.
2020 ರಲ್ಲಿ ಶೇಕಡಾ 2.3 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಏಕೈಕ ಪ್ರಮುಖ ದೇಶ ಚೀನಾ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.