ನವದೆಹಲಿ: ತನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ವಿರುದ್ಧ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಸಮರ ಸಾರಲು ಮುಂದಾಗಿದ್ದಾರೆ.
“ರಾಹುಲ್ ಗಾಂಧಿ ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ. ನಾನು ಪಾಕಿಸ್ಥಾನಕ್ಕೆ ಸಹಾಯ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇನ್ನು ಅವರು ತಪ್ಪಿಸಿಕೊಳ್ಳಲಾರರು. ಅವರು ನನ್ನನ್ನು ಎದುರಿಸಲೇಬೇಕಿದೆ. ಸತ್ಯವನ್ನು ಹೊರತರಲು ಅವರಿಗೆ ಅವಕಾಶ ನೀಡೋಣ. ರಾಹುಲ್ ಅವರೇ, ನಿಮ್ಮ ಬೆಂಬಲಿಗರನ್ನು ಕಳಿಸಬೇಡಿ. ಸಾಧ್ಯವಾದರೆ ಎದುರಿಗೆ ಬಂದು ಒಂದೊಂದಾಗಿ ಸವಾಲು ಎದುರಿಸಿ. ಆದರೆ ಇದು ನಿಮಗೆ ಸಾಧ್ಯವೇ!? ರಾಷ್ಟ್ರ ತಿಳಿಯಲು ಬಯಸುತ್ತಿದೆ” ಎಂದು ಅರ್ನಬ್ ಬಹಿರಂಗ ಸವಾಲು ಹಾಕಿದ್ದಾರೆ.
“ಸುಳ್ಳುಗಳನ್ನು ಹೇಳುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕಾನೂನು ಸಮರ ಸಾರಲು ನಾನು ಮುಂದಾಗಿದ್ದೇನೆ. ಅವರನ್ನು ನಾನು ಕಾನೂನಿನಂತೆ ನ್ಯಾಯಾಲಯದಲ್ಲಿ ಬಹಿರಂಗಪಡಿಸುತ್ತೇನೆ. ದೇಶದ ಜನರು ರಿಪಬ್ಲಿಕ್ ಟಿವಿ ಜೊತೆ ಕೈಜೋಡಿಸಿ ಬೆಂಬಲ ನೀಡಬೇಕು, ರಾಜಕೀಯ ಪಿತೂರಿಯ ವಿರುದ್ಧ ಶಕ್ತಿಯುತವಾಗಿ ಹೋರಾಡಬೇಕು. ಸತ್ಯ ನಮ್ಮ ಕಡೆ ಇದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.