ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಯುಎಸ್ ಎಲೆಕ್ಟ್ರಿಕ್ ವಾಹನಗಳ ದಿಗ್ಗಜ ಟೆಸ್ಲಾ ಬೆಂಗಳೂರಿನಲ್ಲಿ ತನ್ನ ಕಂಪನಿಯನ್ನು ನೋಂದಾಯಿಸಿಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಡಿಸೆಂಬರ್ನಲ್ಲಿ ಕಂಪನಿಯು ಭಾರತದಲ್ಲಿ ಶಾಪ್ ಸ್ಥಾಪನೆ ಮಾಡಲಿದೆ, ಆ ಮೂಲಕ ಮಾರಾಟದಿಂದ ಹಿಡಿದು ಸ್ಥಳೀಯ ಅಸೆಂಬ್ಲಿಂಗ್ ಮತ್ತು ಉತ್ಪಾದನೆಯಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದ್ದರು.
“ಟೆಸ್ಲಾ ಮೋಟಾರ್ಸ್ ಇಂಡಿಯಾ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್” ಎಂದು ಕರೆಯಲ್ಪಡುವ ಈ ಕಂಪನಿಯು ಜನವರಿ 8 ರಂದು ಮೂವರು ನಿರ್ದೇಶಕರೊಂದಿಗೆ ಭಾರತದಲ್ಲಿ ನೋಂದಾಯಿಸಲ್ಪಟ್ಟಿದೆ. ನಿರ್ದೇಶಕರಲ್ಲಿ ಹಿರಿಯ ಟೆಸ್ಲಾ ಅಧಿಕಾರಿಗಳಾದ ಡೇವಿಡ್ ಫೆಯಿನ್ಸ್ಟೈನ್, ವೆಂಕಟರಂಗಂ ಶ್ರೀರಾಮ್ ಮತ್ತು ವೈಭವ್ ತನೇಜಾ ಸೇರಿದ್ದಾರೆ. ತನೇಜಾ ಪ್ರಸ್ತುತ ಟೆಸ್ಲಾ ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ.
ಬೆಳವಣಿಗೆ ಕುರಿತು ಮಾತನಾಡಿದ ಕರ್ನಾಟಕದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಜ್ಯದ ಪ್ರಧಾನ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳು ಕಂಪನಿಯೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.