ಗಾಂಧಿನಗರ: ಸಿಕ್ಕಿಂ ಮಾದರಿಯ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವ ಯೋಜನೆಯನ್ನು ಗುಜರಾತ್ ರಾಜ್ಯ ಸರ್ಕಾರ ರೂಪಿಸಿದೆ ಮತ್ತು ಅದಕ್ಕೆ ಬುಡಕಟ್ಟು ಪ್ರಾಬಲ್ಯದ ಡಾಂಗ್ ಅನ್ನು 100% ಸಾವಯವ ಕೃಷಿ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಿದೆ. ಈ ಜಿಲ್ಲೆಯ ಸಂಪೂರ್ಣ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತಿಸುವ ಯೋಜನೆ ಹಾಕಲಾಗಿದೆ.
ಜಿಲ್ಲೆಯನ್ನು ಸಾವಯವ ಕೃಷಿ ಪ್ರದೇಶಗಳಾಗಿ ಮತ್ತು ಡಾಂಗ್ನ ಕೃಷಿ ಉತ್ಪನ್ನಗಳನ್ನು ಪ್ರಮಾಣೀಕೃತ ಸಾವಯವ ಉತ್ಪನ್ನಗಳಾಗಿ ಉತ್ತೇಜಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ.
ಜಿಲ್ಲೆಯ ಬುಡಕಟ್ಟು ಜನಾಂಗದವರು ಸಾವಯವ ಕೃಷಿಯ ವಿಧಾನಗಳನ್ನು ಅವಲಂಬಿಸಿದ್ದರು, ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹೆಚ್ಚಾಗಿದೆ.
ಸಿಕ್ಕಿಂ ರಾಜ್ಯವನ್ನು ಮೊದಲ 100% ಸಾವಯವ ಕೃಷಿ ಆಧಾರಿತ ರಾಜ್ಯವೆಂದು ಘೋಷಿಸಲಾಗಿದೆ. ಇದೇ ಮಾದರಿಯನ್ನು ಅಳವಡಿಸಲು ಗುಜರಾತ್ ಹೆಚ್ಚು ಉತ್ಸುಹುಕವಾಗಿದೆ.
“ಔಪಚಾರಿಕ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಿಕ್ಕಿಂ ಮತ್ತು ಡಾಂಗ್ ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಗಳನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಡಾಂಗ್ ಜಿಲ್ಲೆಯ ಸುಮಾರು 53,000 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿ ಜಿಲ್ಲೆಯಾಗಿ ಪರಿವರ್ತಿಸಲಾಗುವುದು” ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.