ನವದೆಹಲಿ: ಹಿಂದೂ ಪ್ರಾಬಲ್ಯದ ಜಮ್ಮುನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ಥಾನದ ಭಯೋತ್ಪಾದಕ ಗುಂಪುಗಳು ಹಾತೊರೆಯುತ್ತಿವೆ. ಭಾರತೀಯ ಭದ್ರತಾ ಸಂಸ್ಥೆಗಳ ಇತ್ತೀಚಿನ ವರದಿಯ ಪ್ರಕಾರ, ಜಮ್ಮು ಪ್ರದೇದಲ್ಲಿ ದುಷ್ಕೃತ್ಯಗಳನ್ನು ಎಸಗುವ ಸಲುವಾಗಿಯೇ 118 ಭಯೋತ್ಪಾದಕರು ಒಟ್ಟು ಸೇರಿದ್ದಾರೆ.
ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪಾಕಿಸ್ಥಾನದ ನಟೋರಿಯಸ್ ಐಎಸ್ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಭಯೋತ್ಪಾದಕ ಗುಂಪುಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳುವಂತೆ ಪ್ರೋತ್ಸಾಹಿಸುತ್ತಿವೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಈ ಭಯೋತ್ಪಾದಕರಿಗೆ ಜಿಪಿಎಸ್, ನ್ಯಾವಿಗೇಷನ್ ಸಿಸ್ಟಮ್ ಜೊತೆಗೆ ಚಳಿಗಾಲದ ಬಟ್ಟೆಯನ್ನೂ ಕೂಡ ಒದಗಿಸುತ್ತಿದೆ.
“ಗುಪ್ತಚರ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ, 180 ಭಯೋತ್ಪಾದಕರು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಬಳಿಯ ವಿವಿಧ ಲಾಂಚ್ ಪ್ಯಾಡ್ಗಳಲ್ಲಿ ಇದ್ದರು. ಕಣಿವೆಯ ಪ್ರದೇಶದಲ್ಲಿ 65 ಭಯೋತ್ಪಾದಕರ ಚಲನೆಯನ್ನು ಪತ್ತೆ ಮಾಡಲಾಗಿದೆ” ಎಂದು ಕಾಶ್ಮೀರದಲ್ಲಿ ನಿಯೋಜಿಸಲಾದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ನಲ್ಲಿ ಜಮ್ಮುವಿನಲ್ಲಿ ಸ್ಥಳೀಯ ನಾಯಕರನ್ನು ಗುರಿಯಾಗಿಸುವುದರ ಜೊತೆಗೆ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯನ್ನು ಅಡ್ಡಿಪಡಿಸುವಂತೆ ಭಯೋತ್ಪಾದಕ ಗುಂಪುಗಳಿಗೆ ಸೂಚಿಸಲಾಗಿತ್ತು, ಆದರೆ ಗಡಿಯಲ್ಲಿ ಬಿಗಿಯಾದ ಭದ್ರತೆಯಿಂದಾಗಿ ಜಮ್ಮುಗೆ ಪ್ರವೇಶಿಸಲು ಉಗ್ರರಿಗೆ ಸಾಧ್ಯವಾಗಿಲ್ಲ ಎಂದು ಮತ್ತೊಬ್ಬ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.