ಮುಂಬಯಿ: ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಈ ತಿಂಗಳು ತನ್ನ ಕೋವಿಡ್ ಲಸಿಕೆಯ 10 ಮಿಲಿಯನ್ ಡೋಸ್ಗಳನ್ನು ಭಾರತ ಸರ್ಕಾರಕ್ಕೆ ಪೂರೈಸಬಲ್ಲದು ಎಂದು ಅದರ ಸಿಇಒ ಆದರ್ ಪೂನವಾಲಾ ಹೇಳಿದ್ದಾರೆ. ದೇಶದ ಔಷಧ ನಿಯಂತ್ರಕದ ವಿಷಯ ತಜ್ಞರ ಸಮಿತಿಯು ಶುಕ್ರವಾರ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ.
ಕಂಪನಿಯು ತನ್ನ ಕೋವಿಶೀಲ್ಡ್ ಲಸಿಕೆಯ ಸರಬರಾಜನ್ನು ಒಂದು ವಾರದ ಅವಧಿಯಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಪೂನವಾಲಾ ಹೇಳಿದ್ದಾರೆ. ಬೆಲೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಔಪಚಾರಿಕ ಖರೀದಿ ಒಪ್ಪಂದಕ್ಕಾಗಿ ಎಸ್ಐಐ ಕಾಯುತ್ತಿದೆ.
“ನಾವು ಈ ಮೊದಲು ಹಂಚಿಕೊಂಡಂತೆ ಬೆಲೆ ಸರ್ಕಾರಗಳಿಗೆ ರೂ. 220 ಮತ್ತು ಖಾಸಗಿ ಮಾರುಕಟ್ಟೆಗೆ ರೂ.1,000 ಆಗಿರುತ್ತದೆ” ಎಂದು ಪೂನವಾಲಾ ಸಂದರ್ಶನದಲ್ಲಿ ಹೇಳಿದ್ದರು. ಇದು ಖಾಸಗಿ ಮಾರಾಟಕ್ಕೆ ಸರ್ಕಾರ ಅವಕಾಶ ನೀಡುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.
ಕಂಪನಿಯು ಒಟ್ಟು 100 ಮಿಲಿಯನ್ ಡೋಸ್ಗಳನ್ನು ತಯಾರಿಸಿದೆ ಎಂದು ಹೇಳಿದೆ ಆದರೆ ಔಪಚಾರಿಕ ಒಪ್ಪಂದಕ್ಕಾಗಿ ಕಾಯುತ್ತಿರುವುದರಿಂದ ಅವುಗಳನ್ನು ಇನ್ನೂ ಬಾಟಲುಗಳಲ್ಲಿ ತುಂಬಿಸಿಲ್ಲ ಎನ್ನಲಾಗಿದೆ.
“ಯಾವುದೇ ಒಪ್ಪಂದಗಳಿಗೆ ಸಹಿ ಹಾಕದಿದ್ದರೂ, ನಾವು ಸರ್ಕಾರದೊಂದಿಗೆ ಪಾಲುದಾರರಾಗಲು ಸಿದ್ಧರಿದ್ದೇವೆ” ಎಂದು ಪೂನವಾಲಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.