ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು ಜಮ್ಮುವಿನಲ್ಲಿ 100 ಕೋಟಿ ರೂ.ಗಳ ಮೌಲ್ಯದ ಭೂಮಿಯನ್ನು ಅತಿಕ್ರಮಣದಾರರಿಂದ ಯಶಸ್ವಿಯಾಗಿ ವಶಪಡಿಸಿಕೊಂಡಿದೆ ಎಂದು ಮೂಲಗಳು ವರದಿ ಮಾಡಿವೆ.
ವಿಶೇಷ ಅಭಿಯಾನದ ಅಡಿಯಲ್ಲಿ ದಶಕಗಳಷ್ಟು ಹಿಂದೆ ಅತಿಕ್ರಮಣ ಮಾಡಲಾದ ಭೂಮಿಗಳನ್ನು ಹಿಂಪಡೆಯಲಾಗಿದೆ, ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಜಮ್ಮುವಿನ ಐಷಾರಾಮಿ ಗಾಂಧಿ ನಗರ ಪ್ರದೇಶ ಮತ್ತು ಗೋಲ್ ಮಾರ್ಕೆಟ್ ಪ್ರದೇಶದ ಭೂ ಅತಿಕ್ರಮಣಗಳನ್ನು ಪತ್ತೆ ಹಚ್ಚಿ ಇವರುಗಳು ಮೊಹರು ಮಾಡಿದ್ದಾರೆ.
ನಾವು ಅತಿಕ್ರಮಣಗಳ ಬಗ್ಗೆ ಮೃದು ಧೋರಣೆ ತಾಳುವುದಿಲ್ಲ ಮತ್ತು ಪ್ರತಿಯೊಬ್ಬ ಅತಿಕ್ರಮಣಕಾರರಿಂದ ಸರ್ಕಾರಿ ಜಮೀನುಗಳನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.
ಅಭಿಯಾನದ ಭಾಗವಾಗಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಧೀರಜ್ ಗುಪ್ತಾ ಅವರ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಏಳು ಕೆನಲ್ ಭೂಮಿಯನ್ನು ಅತಿಕ್ರಮಣಗಳಿಂದ ಹಿಂಪಡೆದಿದ್ದಾರೆ. ಈ ಭೂಮಿ ಜಮ್ಮು ಮತ್ತು ಕಾಶ್ಮೀರ ವಸತಿ ಮಂಡಳಿಗೆ ಸೇರಿದ್ದಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.