ತಿರುವನಂತಪುರಂ: ಕೇರಳದ ಮಲಪ್ಪುರಂ, ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡದಾದ್ಯಂತ 354 ಸ್ಥಳೀಯ ಸಂಸ್ಥೆಗಳ 6,867 ವಾರ್ಡ್ಗಳಿಗೆ ಇಂದು ಚುನಾವಣೆ ನಡೆಯುತ್ತಿವೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ರವರೆಗೆ ಮುಂದುವರಿಯಲಿದೆ. ಮುಂಜಾನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ ಚಲಾಯಿಸಿದರು.
ಇದು ಸ್ಥಳಿಯಾಡಳಿತ ಚುನಾವಣೆಯ ಅಂತಿಮ ಹಂತದ ಮತದಾನವಾಗಿದೆ.
“ಅಂತಿಮ ಸುತ್ತಿನಲ್ಲಿ 42,87,597 ಪುರುಷರು, 46,87,310 ಮಹಿಳೆಯರು ಮತ್ತು 86 ತೃತೀಯಲಿಂಗಿಗಳು ಸೇರಿದಂತೆ 89,74,993 ಮತದಾರರಿದ್ದಾರೆ. ಇದರಲ್ಲಿ 71,906 ಪ್ರಥಮ ಬಾರಿಯ ಮತದಾರರು ಮತ್ತು 1,747 ಎನ್ಆರ್ಐ ಮತದಾರರು ಸೇರಿದ್ದಾರೆ.
10,842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ 1,105 ಸಮಸ್ಯೆಇರುವ ಮತದಾನ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗ್ ಅನ್ನು ಪರಿಚಯಿಸಲಾಗಿದೆ.
ರಾಜ್ಯವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಸಮಯದಲ್ಲಿ ಚುನಾವಣೆಗಳು ನಡೆಯುತ್ತಿದೆ. ಹೀಗಾಗಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.