ನವದೆಹಲಿ: ಹಲವು ವಿಶೇಷ ಸಂದರ್ಭಗಳಲ್ಲಿ ಗೂಗಲ್ ತನ್ನ ವಿಶಿಷ್ಟ ಡೂಡಲ್ಗಳನ್ನು ರಚಿಸಿ ನೋಡುಗರನ್ನು ಸೆಳೆಯುತ್ತದೆ. ಅದರಂತೆ ಈ ಕೊರೋನಾ ಕಠಿಣತೆಯ ಸಂದರ್ಭದಲ್ಲಿಯೂ ಆರೋಗ್ಯ ರಕ್ಷಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಕಾರ್ಮಿಕರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ. ಇದೀಗ ಪ್ಯಾಕೇಜಿಂಗ್, ಶಿಪ್ಪಿಂಗ್ ಮತ್ತು ವಿತರಣಾ ಸೇವೆ ನಡೆಸುತ್ತಿರುವವರಿಗೆ ಗೂಗಲ್ ಡೂಡಲ್ ರಚಿಸಿ ಗೌರವ ಸಲ್ಲಿಸಿದೆ.
ಮಾರಣಾಂತಿಕ ವೈರಸ್ ಕೊರೋನಾ ಹರಡುತ್ತಿರುವುದರಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರಿಗೆ ಬೇಕಾದ ಆಹಾರ ವಸ್ತುಗಳನ್ನು ಪ್ಯಾಕ್ ಮಾಡಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿ, ಅದನ್ನು ಅಗತ್ಯವಿರುವ ಜನರಿಗೆ ತಲುಪಿಸುವ ಮೂಲಕ ಸೇವೆ ಸಲ್ಲಿಸುವ ಕೆಲಸವನ್ನು ಮಾಡುವವರಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಸ್ವಾರ್ಥ ಮನೋಭಾವ ಹೊಂದದೇ ಜನಸೇವೆಯಲ್ಲಿ ತೊಡಗಿರುವವರ ಕೆಲಸವನ್ನು ಗೌರವಿಸುವ ನಿಟ್ಟಿನಲ್ಲಿ ಗೂಗಲ್ ಡೂಡಲ್ ಅನ್ನು ರಚಿಸಿ ನಮನ ಸಲ್ಲಿಸಿದ್ದಾರೆ.
ಈ ಹಿಂದೆ ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಜನರ ಆರೋಗ್ಯ ರಕ್ಷಣೆ ಮಾಡುವ ಆರೋಗ್ಯ ರಕ್ಷಕರಿಗೆ ಗೂಗಲ್ ಡೂಡಲ್ಗಳನ್ನು ರಚಿಸಿ ಗೌರವ ಸಲ್ಲಿಸಿತ್ತು. ಮುಂದಿನ ಎರಡು ವಾರಗಳಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ರಕ್ಷಕರಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.