ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಪ್ರಕಟವಾದ ಮಂಗಳವಾರ ದೆಹಲಿಯ ಶಹೀನ್ ಭಾಗ್ ಪ್ರತಿಭಟನಾ ಸ್ಥಳ ಸಂಪೂರ್ಣವಾಗಿ ಖಾಲಿ ಖಾಲಿಯಾಗಿತ್ತು. ಎಎಪಿ ಅಭೂತಪೂರ್ವ ರೀತಿಯಲ್ಲಿ ಮುನ್ನಡೆ ಗಳಿಸುತ್ತಿದ್ದಂತೆ ಶಹೀನ್ ಭಾಗ್ ಖಾಲಿಯಾಗಿದೆ. ಮತದಾನದ ದಿನ ಇದು ಕೂಡ ಖಾಲಿಯಾಗಿತ್ತು.
ಶಹೀನ್ ಭಾಗ್ನಲ್ಲಿ ಪ್ರತಿಭಟನಾ ನಿರತರಾಗಿದ್ದವರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಮತದಾನವನ್ನು ಮಾಡಿದ್ದರು. ಹೀಗಾಗಿ ಪ್ರತಿಭಟನಾ ಸ್ಥಳ ಖಾಲಿಯಾಗಿತ್ತು.
ಕಳೆದ 55 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಹೀನ್ ಭಾಗ್ನಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಇದರಿಂದ ಅಲ್ಲಿನ ಸ್ಥಳಿಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಾಹನ ಸಂಚಾರದಲ್ಲಿ ವ್ಯತ್ಯಾಯ ಆಗುತ್ತಿದೆ. ಹೀಗಾಗಿ ಶಹೀನ್ ಭಾಗ್ ಅನ್ನು ತೆರೆವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೂ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿದೆ.
ಇದೀಗ ಚುನಾವಣೆಯ ಬಳಿಕ ಶಹೀನ್ ಭಾಗ್ ಖಾಲಿಯಾಗುವ ಸೂಚನೆಗಳು ಗೋಚರಿಸುತ್ತಿದೆ. ಚುನಾವಣೆಯ ಬಳಿಕ ಪ್ರತಿಭಟನಾಕಾರರ ಪ್ರತಿಭಟನೆ ನಡೆಸುವ ಉತ್ಸಾಹವೂ ಕುಗ್ಗಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 63 ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ 7 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.