
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಫ್.ಐ.ಸಿ.ಸಿ.ಐನ 93ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ವಾರ್ಷಿಕ ಸಮಾವೇಶ ಉದ್ದೇಶಿಸಿ 2020ರ ಡಿಸೆಂಬರ್ 12ರಂದು 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಎಫ್.ಐ.ಸಿ.ಸಿ.ಐನ ವಾರ್ಷಿಕ ಎಕ್ಸ್ ಪೋ 2020 ಯನ್ನೂ ಉದ್ಘಾಟಿಸಲಿದ್ದಾರೆ.
ಎಫ್.ಐ.ಸಿ.ಸಿ.ಐ ವಾರ್ಷಿಕ ಸಮಾವೇಶ ವರ್ಚುವಲ್ ಮೂಲಕ 2020ರ ಡಿಸೆಂಬರ್ 11, 12 ಮತ್ತು 14ರಂದು ನಡೆಯಲಿದೆ. ಈ ವರ್ಷದ ವಾರ್ಷಿಕ ಸಮಾವೇಶದ ಧ್ಯೇಯವಾಕ್ಯ “ಪ್ರೇರಣೆಯ ಭಾರತ” ಎಂಬುದಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಚಿವರು, ಅಧಿಕಾರಿಗಳು, ಉದ್ಯಮದ ನಾಯಕರು, ರಾಜತಾಂತ್ರಿಕರು, ಅಂತಾರಾಷ್ಟ್ರೀಯ ತಜ್ಞರು ಮತ್ತು ಇತರ ಪ್ರಮುಖ ಪ್ರಕಾಶಕರು ಭಾಗವಹಿಸಲಿದ್ದಾರೆ. ಈ ಸಮಾವೇಶವು ವಿವಿಧ ಬಾಧ್ಯಸ್ಥರು ಆರ್ಥಿಕತೆಯ ಮೇಲೆ ಕೋವಿಡ್ -19 ರ ಪರಿಣಾಮಗಳು, ಸರ್ಕಾರವು ಕೈಗೊಳ್ಳುತ್ತಿರುವ ಸುಧಾರಣೆಗಳು ಮತ್ತು ಭಾರತೀಯ ಆರ್ಥಿಕತೆಗೆ ಮುಂದಿನ ದಾರಿಗಳ ಕುರಿತು ಚರ್ಚಿಸುವುದಕ್ಕೆ ಸಾಕ್ಷಿಯಾಗಲಿದೆ.
ಎಫ್.ಐ.ಸಿ.ಸಿ.ಐ ವಾರ್ಷಿಕ ಎಕ್ಸ್ ಪೋ 2020 2020ರ ಡಿಸೆಂಬರ್ 11ರಂದು ಆರಂಭವಾಗಲಿದೆ ಮತ್ತು ಒಂದು ವರ್ಷಗಳ ಕಾಲ ನಡೆಯಲಿದೆ. ವರ್ಚುವಲ್ ಎಕ್ಸ್ ಪೋ ಪ್ರಪಂಚದಾದ್ಯಂತದ ಪ್ರದರ್ಶಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಅವರ ವ್ಯಾಪಾರ ಭವಿಷ್ಯವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



