News13

ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ

ದಿ ಕ್ಯಾಂಪ್ಕೊ ಲಿಮಿಟೆಡ್ – ಸಂಕ್ಷಿಪ್ತ ವಿವರಣೆ

ಕ್ಯಾಂಪ್ಕೊ ಲಿಮಿಟೆಡ್, 1973 ರಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಬಹು ರಾಜ್ಯ ಸಹಕಾರಿ ಸಂಘವಾಗಿದೆ.

ಭಾರತದಾದ್ಯಂತ ವ್ಯಾಪಕವಾದ ಸಂಗ್ರಹಣೆ ಮತ್ತು ಮಾರುಕಟ್ಟೆಯನ್ನು ಹೊಂದಿರುವ ಕ್ಯಾಂಪ್ಕೊ ಜನರಿಂದ ಜನರಿಗಾಗಿ ಜನರಿಗೋಸ್ಕರ ಸ್ಥಾಪಿತವಾದ ಸಹಕಾರಿ ಸಂಸ್ಥೆ. ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಇದೀಗ ಕರಿಮೆಣಸಿನ ವ್ಯವಹಾರಗಳ ಜೊತೆಗೆ ಕೊಕ್ಕೊ ಆಧಾರಿತ ಚಾಕೊಲೇಟ್ ಮತ್ತು ಇತರ ಅರೆ-ಸಿದ್ಧ ಕೊಕ್ಕೊ ಉತ್ಪನ್ನಗಳನ್ನು ಸಹ ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದೆ.

3576 ರೈತರ ಸದಸ್ಯತ್ವದೊಂದಿಗೆ ಶುರುವಾದ ಕ್ಯಾಂಪ್ಕೊ ಈಗ 1,38,000 ಕ್ಕೂ ಹೆಚ್ಚು ರೈತರ ಸದಸ್ಯತ್ವವನ್ನು ಹೊಂದಿದೆ. ಎಪ್ಪತ್ತರ ದಶಕದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ಏರುಪೇರಿನಿಂದ ರೈತರನ್ನು ಪಾರುಮಾಡಲು ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆಯನ್ನು ನೀಡುವ ಮೂಲಕ ಬೆಳೆಗಾರರ ಜೀವನದ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಕ್ಯಾಂಪ್ಕೊ ಸ್ಥಾಪಿಸಲಾಯಿತು. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ವಿಶಿಷ್ಟ ಸಂಯೋಜನೆಯ ಮುಖಾಂತರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯಡಿಯಲ್ಲಿ ಶ್ರೀ ವಾರಣಾಶಿ ಸುಬ್ರಾಯ ಭಟ್ ಅವರ ರೈತೋಪಯೋಗಿ ದೂರದೃಷ್ಠಿತ್ವದಿಂದ ಸ್ಥಾಪಿಸಲಾದ ಕ್ಯಾಂಪ್ಕೊ ಲಿಮಿಟೆಡ್ ಅಂದಿನ ಅಡಿಕೆ ಮಾರುಕಟ್ಟೆಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಗ್ಗಿಸಿತು.

1986 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ, ಕೊಕ್ಕೊಗೆ ಯಾವುದೇ ಖರೀದಿದಾರರು ಇರಲಿಲ್ಲ. ಕೊಕ್ಕೊ ಬೆಳೆಗಾರರನ್ನು ಈ ಸಂಕಷ್ಟದಿಂದ ಪಾರು ಮಾಡಲು, ಆಗ್ನೇಯ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಕ್ಯಾಂಪ್ಕೊ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿ ಕೊಕ್ಕೊ ಬೆಳೆಗಾರರ ಸಂಕಷ್ಟಕ್ಕೆ ಮಿಡಿಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವರ್ಷಕ್ಕೆ 23,000 ಮೆಟ್ರಿಕ್ ಟನ್ ಉತ್ಪಾದನೆ ನೀಡುತ್ತಿದೆ. ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಖಾನೆಯನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಶ್ರೀ ಗ್ಯಾನಿ ಜೈಲ್ ಸಿಂಗ್ ಅವರು ಉದ್ಘಾಟಿಸಿದರು. ಪರಿಸರ ಸ್ನೇಹಿ ಇಂಧನ ಬಳಕೆಗೋಸ್ಕರ ಕ್ಯಾಂಪ್ಕೊ ಮೂರು ವಿಂಡ್ ಮಿಲ್ ಘಟಕಗಳನ್ನು ಮತ್ತು ೫೦೦ ಮೆಗಾ ವ್ಯಾಟ್ ಸೌರ ಫಲಕಗಳನ್ನು ಸ್ಥಾಪಿಸಿದೆ. ಫ್ಯಾಕ್ಟರಿಯಲ್ಲಿ ವಿ.ಎ.ಎಂ ಗಳನ್ನು ಕೂಡಾ ಸ್ಥಾಪಿಸಲಾಗಿದೆ.

ಸಮರ್ಥ ಆಡಳಿತಾಧಿಕಾರಿಯಾದ ಶ್ರೀ ಎ. ಕಿಶೋರ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್. ಎಂ. ಕೃಷ್ಣಕುಮಾರ್ ಅವರ ನಾಯಕತ್ವದಲ್ಲಿ ಕ್ಯಾಂಪ್ಕೊ ದೇಶದಾದ್ಯಂತ 160 ಕ್ಕೂ ಹೆಚ್ಚು ಶಾಖೆಗಳನ್ನೂ, 2000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿ ರೂ. 2778 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ಸಮರ್ಥಕವಾಗಿ ನಡೆಸುತ್ತಿದೆ. ಸದಸ್ಯರ ಸಹಕಾರ ಹಾಗೂ ಕ್ರಿಯಾತ್ಮಕ ನಾಯಕತ್ವ ಕ್ಯಾಂಪ್ಕೊದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಬದಲಾಗುತ್ತಿರುವ ಅಡಿಕೆ ಮಾರುಕಟ್ಟೆಯ ಸ್ಥಿತಿ – ಗತಿ, ಮಾರುಕಟ್ಟೆಯ ಏರುಪೇರುಗಳನ್ನು ಸಮರ್ಥವಾಗಿ ಎದುರಿಸಿ ಬೆಳೆಗಾರರ, ಸದಸ್ಯರ ವಿಶ್ವಾಸವನ್ನು ಗಳಿಸಿ ಭವಿಷ್ಯದಲ್ಲಿಯೂ ರೈತರ ಹಿತಾಸಕ್ತಿಯನ್ನು ಕಾಪಾಡುವ ಭರವಸೆ ನೀಡುತ್ತಾ ಸಾಗುತ್ತಿದೆ ಕ್ಯಾಂಪ್ಕೊ.

THE CENTRAL ARECANUT & COCOA MARKETING AND PROCESSING COOPERATIVE LIMITED


The CAMPCO Ltd., is a prestigious Multi State Cooperative established in the year 1973. It is a Cooperative of the people, by the people and for the people having widespread procuring and marketing network all over India. It deals in Arecanut, Cocoa, Rubber and Pepper and also manufactures Cocoa based Chocolates and other Semi Finished Cocoa Products.

With an initial Farmer Membership base of 3576 Members, it has now grown to a Membership of more than 1,38,000 Farmer Members. The CAMPCO Ltd., was established with the main objective of uplifting the Arecanut Growers from the hardship caused due to the glut in Arecanut Market in the Seventies. There were no signs of Market recovery and the small Agriculturists faced a dark future. In order to mitigate the crisis situation, the CAMPCO Ltd., was established by a Visionary Agriculturist Sri.Varanashi Subraya Bhat under the Karnataka Cooperative Societies Act, as an unique venture of both the States of Karnataka and Kerala.

Further in the year 1986 due to crash in the International Market, there were no Buyers for Cocoa Beans. To rescue the Farmers from distress, CAMPCO took up the responsibility and performed a Saviour’s role by setting up second biggest Chocolate Manufacturing Unit in South East Asia- THE CAMPCO CHOCOLATE FACTORY in Puttur, Dakshina Kannada District with state of the art technology with a capacity of 23,000 Metric tonne per annum. The Factory fully equipped with automatic and sophisticated machineries was commissioned by Sri.Giani Zail Singh, the then Hon’ble President of India. Towards green energy , CAMPCO has set up three Wind Mill Units and also solar panels of 500MW. VAMs too have been installed at the Factory.

With a network of more than 160 Branches spread across the Country, a workforce of more than 2000 and an Annual turnover of more than Rs.2,778 Crores, CAMPCO is professionally managed by a committed Team of Members on the Board of Management under the dynamic Leadership of Sri.A.Kishore Kumar Kodgi, President and an able Administrator Sri.H.M.Krishna Kumar, Managing Director of CAMPCO.

CAMPCO has withstood the brunt of changing Market trends, recessions and upheavals in the Arecanut Market. Through a judicious Marketing Strategy, CAMPCO has gained the confidence of the Grower Members and assures that in future too it will abide by the main objective for which CAMPCO has been set up- SAFEGUARDING THE INTEREST OF THE GROWER MEMBERS.

Back To Top