ಮಂಗಳೂರು: ಮಣಿಪಾಲದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ತನ್ನ ಮಗಳನ್ನು ನೋಡಲು ‘ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ’ ಎಂಬ ಸಂದೇಶವನ್ನು ಸಾರುತ್ತಾ ತಂದೆಯೊಬ್ಬರು 1,800 ಕಿಮೀ ಬೈಕ್ ಸವಾರಿ ಮಾಡಿದ್ದಾರೆ.
ವೃತ್ತಿಯಲ್ಲಿ ಷೇರ್ ಸಬ್ ಬ್ರೋಕರ್ ಆಗಿರುವ 52 ವರ್ಷದ ಸಜಲ್ ಸೇತ್ ಮಾ.28ರಿಂದ ಕಟಕ್ ನಿಂದ ತಮ್ಮ ಬೈಕ್ ಮೂಲಕ ಹೊರಟು ಮೂರು ದಿನಗಳಲ್ಲಿ ಮಣಿಪಾಲವನ್ನು ತಲುಪಿದ್ದಾರೆ. ದಿನಕ್ಕೆ 600 ಕಿಮೀಯಂತೆ ಒಟ್ಟು 1800 ಕಿಮೀ ಪ್ರಯಾಣಿಸಿದ್ದಾರೆ.
ಮಗಳನ್ನು ಕಾಣಲು ಬಂದ ಅವರು ತಮ್ಮ ಪ್ರಯಾಣದುದ್ದಕ್ಕೂ ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಈ ಬಗೆಗಿನ ಧ್ವಜವನ್ನೂ ಬೈಕ್ನಲ್ಲಿ ಅಳವಡಿಸಿದ್ದರು. ಶಿಕ್ಷಿಕತಳಾದ ಹೆಣ್ಣು ಎಷ್ಟೇ ಕಷ್ಟವಾದರೂ ಬದುಕನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ ಎಂಬುದು ಅವರ ದೃಢ ನಂಬಿಕೆ.
ಬೈಕರ್ ಆಗಿರುವ ಅವರು 2013ರಲ್ಲಿ ತಮ್ಮ ಕಿರಿಯ ಮಗಳನ್ನು ಕಾಣಲು 3,863 ಕಿಮೀ ದೂರ ಬೈಕ್ ಸವಾರಿ ಮಾಡಿದ್ದರು.