ರಾಂಚಿ: ಆನೆ ಮತ್ತು ಮಾನವನ ನಡುವಿನ ಸಂಘರ್ಷ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಕೇರಳ, ಕರ್ನಾಟಕ, ಪಶ್ಚಿಮಬಂಗಾಳ ಹೀಗೆ ಬಹುತೇಕ ರಾಜ್ಯಗಳಲ್ಲಿ ಆನೆಗಳ ಹಾವಳಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ಕಾಡು ಬಿಟ್ಟು ನಾಡಿಗೆ ಬರುವಂತೆ ಆನೆಗಳನ್ನು ಪ್ರಚೋದಿಸಿದ್ದು ಕೂಡ ಮಾನವನೇ ಎಂಬುದನ್ನು ಮರೆಯುವಂತಿಲ್ಲ.
ಜಾರ್ಖಾಂಡ್ನ ಅರಣ್ಯ ಇಲಾಖೆ ಆನೆಗಳಿಂದ ಜನರಿಗೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಎಫ್ಎಮ್ನ್ನು ಬಳಸಿಕೊಂಡಿದ್ದಾರೆ. ಎಫ್ಎಮ್ನ ವಿಶೇಷ ಬುಲೆಟಿನ್ವೊಂದರಲ್ಲಿ ಹಮಾರ ಹಾಥಿ, ಹಮಾರ ಸಾಥಿ ಎಂಬ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ಇಲ್ಲಿ ಆನೆಗಳ ಮಾಹಿತಿ, ಅರಿವನ್ನು ಮೂಡಿಸಲಾಗಿದೆ.
ಆನೆಗಳು ಓಡಾಡುವ ಸಮಯ, ಸ್ಥಳದ ಬಗ್ಗೆ ರೇಡಿಯೋ ಜಾಕಿ ಮಾಹಿತಿ ನೀಡಿದ್ದಾನೆ. ಅಲ್ಲದೇ ಜನರನ್ನು ಜಾಗರೂಕವಾಗಿ ಇರುವಂತೆ ಎಚ್ಚರಿಸಿದ್ದಾನೆ. ಈ ಬುಲೆಟಿನ್ನನ್ನು ದಿನಕ್ಕೆ ಎರಡು ಬಾರಿ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.