ನವದೆಹಲಿ: ಭಾರತೀಯ ರೈಲ್ವೇಯು 2017-18ರ ಸಾಲಿನಲ್ಲಿ ಸುಮಾರು 1,160 ಮಿಲಿಯನ್ ಟನ್ಗಳಷ್ಟು ಸರಕುಗಳನ್ನು ಸಾಗಾಣೆ ಮಾಡಿದೆ. ಇದು ರಾಷ್ಟ್ರೀಯ ಸಾರಿಗೆಯ ಅತೀದೊಡ್ಡ ದಾಖಲೆಯಾಗಿದೆ.
ಕಳೆದ ಐದು ವರ್ಷದಲ್ಲಿ ರೈಲ್ವೇಯ ಸರಕು ಸಾಗಾಣಾ ಸಾಮರ್ಥ್ಯ ಗಣನೀಯ ಏರಿಕೆಯಾಗಿದೆ.2016-17ರಲ್ಲಿ ಒಟ್ಟು 1,109 ಮಿಲಿಯನ್ ಸರಕುಗಳನ್ನು ಲೋಡ್ ಮಾಡಲಾಗಿತ್ತು. ಅದಕ್ಕೂ ಮುಂಚಿನ ವರ್ಷದಲ್ಲಿ 1,104 ಮಿಲಿಯನ್ ಟನ್ ಆಗಿತ್ತು.
ಸರಕು ಸಾಗಾಣೆ ಭಾರತೀಯ ರೈಲ್ವೇಯ ಅತೀದೊಡ್ಡ ಆದಾಯದ ಮೂಲವಾಗಿದ್ದು, ರಾಷ್ಟ್ರೀಯ ಟ್ರ್ಯಾಕ್ಗಳಲ್ಲಿ ನಿತ್ಯ ಸಾಗುವ 13,000 ರೈಲುಗಳಲ್ಲಿ ಮೂರನೇ 1ರಷ್ಟು ರೈಲು ಗೂಡ್ಸ್ ರೈಲಾಗಿದೆ. ಇದು ಒಟ್ಟು ಆದಾಯದ ಶೇ.65ರಷ್ಟು ಆದಾಯವನ್ನು ರೈಲ್ವೇಗೆ ತಂದುಕೊಡುತ್ತದೆ.