ನವದೆಹಲಿ: ರೂ.50 ಸಾವಿರಕ್ಕಿಂತ ಅಧಿಕ ಬೆಲೆಯ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಣೆ ಮಾಡುವ ಉದ್ಯಮಿಗಳು, ಸಾಗಾಣೆದಾರರು ಎಲೆಕ್ಟ್ರಾನಿಕ್ ಅಥವಾ ಇ-ವೇ ಬಿಲ್ ಹೊಂದುವುದು ಕಡ್ಡಾಯವಾಗಿದೆ ಎಪ್ರಿಲ್ 1ರಿಂದಲೇ ಈ ನಿಯಮ ಜಾರಿಯಾಗಿದೆ.
ಪ್ರಸ್ತುತ ನಗದು ರೂಪದಲ್ಲಿ ನಡೆಯುತ್ತಿರುವ ಈ ವ್ಯವಹಾರವನ್ನು ಡಿಜಟಲೀಕರಣಗೊಳಿಸಿ ಆ ಮೂಲಕ ತೆರಿಗೆ ಸಂಗ್ರಹವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಫೆ.1ರಂದು ಸರಕು ಮತ್ತು ಸೇವಾ ತೆರಿಗೆಯ ಇ-ವೇ ಬಿಲ್ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ.
ಇಂಟರ್ ಸ್ಟೇಟಸ್ ಇ-ವೇ ಬಿಲ್ ಪಾವತಿಗೆ ಪೋರ್ಟಲ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಪೋರ್ಟಲ್ನಲ್ಲಿ 11 ಲಕ್ಷ ನೋಂದಾವಣಿಗಳು ಆಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.