ಟೋಕಿಯೋ : ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 9ನೇ ಭಾರತ-ಜಪಾನ್ ತಂತ್ರಗಾರಿಕಾ ಮಾತುಕತೆಯಲ್ಲಿ ಭಾಗವಹಿಸುವ ಸಲುವಾಗಿ ಟೋಕಿಯೋ ಪ್ರವಾಸ ಆರಂಭಿಸಿದ್ದಾರೆ.
ಜಪಾನಿನ ವಿದೇಶಾಂಗ ಸಚಿವ ತರೋ ಕೊನೊ ಅವರೊಂದಿಗೆ ಸುಷ್ಮಾ ಅವರು ಗುರುವಾರ ತಂತ್ರಗಾರಿಕಾ ಮಾತುಕತೆ ನಡೆಸಲಿದ್ದಾರೆ.
ಟೋಕಿಯೋಗೆ ಬುಧವಾರ ಭೇಟಿ ನೀಡಿರುವ ಸುಷ್ಮಾ ಒಟ್ಟು 3 ದಿನಗಳ ಕಾಲ ಅಲ್ಲಿರಲಿದ್ದಾರೆ.
ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಲಿದ್ದು, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪರಸ್ಪರ ಹಿತಾಸಕ್ತಿಗಳ ಬಗ್ಗೆ ಚರ್ಚಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.